Wednesday, 12th December 2018

Recent News

ಮದ್ವೆ ವಿಚಾರ ಹೇಳ್ತಿದ್ದಂತೆ ನಟ ಧ್ರುವ ಕಂಗಾಲು..!

ಬೆಂಗಳೂರು: ಆ್ಯಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಮದುವೆ ಸುದ್ದಿ ಹರಿದಾಡುತ್ತಿದ್ದಂತೆ ಸರ್ಜಾ ಅಭಿಮಾನಿಗಳು ಸಂತಸ ಪಡುವ ಬದಲು ಹುಡುಗಿಯರು ತಮ್ಮ ನೆಚ್ಚಿನ ನಟನ ಮೇಲೆ ಮುನಿಸಿಕೊಂಡಿದ್ದಾರೆ.

ಹೌದು. ಇತ್ತೀಚೆಗೆ ಧ್ರುವ ಅವರ ಬರ್ತ್ ಡೇ ಆಚರಣೆ ನಡೆದಿದ್ದು, ಇದೇ ದಿನ ಅವರು ತಾನು ಲವ್ ಮ್ಯಾರೇಜ್ ಆಗುವುದಾಗಿ ತಿಳಿಸಿದ್ದರು. ನಟನ ಹೇಳಿಕೆಯ ಬೆನ್ನಲ್ಲೇ ಮದುವೆಯಾಗುವ ಹುಡುಗಿಯ ಫೋಟೋ ರಿವೀಲ್ ಮಾಡಿದರು. ಫೋಟೋ ರಿವೀಲ್ ಮಾಡಿದ ದಿನದಿಂದ ಕೆಲ ಫ್ಯಾನ್ಸ್ ಗಳು ಕಾಟ ಕೊಡೋಕೆ ಶುರು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಧ್ರುವ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ದಿನದಿಂದ ಧ್ರುವಾಗೆ ಅನಾಮಧೇಯ ಹುಡುಗಿಯರ ಕರೆ ಬರೋಕೆ ಶುರುವಾಗಿದೆಯಂತೆ. ಕೆಲ ಹುಡುಗಿಯರು ಧ್ರುವ ಸ್ನೇಹಿತರಿಗೆ, ಇನ್ನೂ ಕೆಲವರು ಧ್ರುವಾಗೇ ಕರೆ ಮಾಡಿ ಮದುವೆಯಾದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ, ನಾನೂ ನಿಮ್ಮನ್ನ ತುಂಬಾ ಪ್ರೀತಿಸುತ್ತೇನೆ ನನ್ನೇ ಮದುವೆಯಾಗು ಅಂತ ಹೇಳಿದ್ದಾರೆ. ಇನ್ನೂ ಕೆಲವರು ನೀವು ಮದುವೆಯಾದರೆ ಮನೆ ಮುಂದೆ ಬಂದು ಧರಣಿ ಕೂರುತ್ತೇವೆ ಅಂತ ಬೆದರಿಕೆ ಒಡ್ಡುತ್ತಿದ್ದಾರೆ ಎನ್ನಲಾಗಿದೆ.

14 ವರ್ಷಗಳ ಅದ್ಧೂರಿ ಪ್ರೀತಿಗೆ ಧ್ರುವ ಮದುವೆ ಕೊಂಡಿ ಬೆಸೆಯೋಕೆ ಸಜ್ಜಾಗಿದ್ದಾರೆ. ಬಾಲ್ಯದ ಗೆಳತಿಯನ್ನ ಬಾಳ ಸಂಗಾತಿಯಾಗಿ ಸ್ವೀಕರಿಸಲು ಧ್ರುವಾ ಸಜ್ಜಾಗಿದ್ದು ಮುಂದಿನ ತಿಂಗಳು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಬಹುಕಾಲದಿಂದ ಪ್ರೀತಿಸುತ್ತಾ ಬಂದಿರುವ ಪ್ರೇರಣಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡೋಕೆ ಧ್ರುವ ಮನಸ್ಸು ಮಾಡಿದ್ದು, ಅತಿ ಶೀಘ್ರದಲ್ಲೇ ಈ ಜೋಡಿಯ ಮದುವೆಯ ದಿನಾಂಕವೂ ನಿಗದಿಯಾಗಲಿದೆ.

ಸದ್ಯಕ್ಕಂತೂ ಧ್ರುವ ಕೆಲ ಲೇಡಿ ಫ್ಯಾನ್ಸ್ ಗಳ ಕಾಟಕ್ಕೆ ಕಂಗಾಲಾಗಿ ಕುಳಿತಿದ್ದಾರೆ. ಯಾವ ರೀತಿಯಲ್ಲಿ ನೊಂದ ಫ್ಯಾನ್ಸ್ ಗಳಿಗೆ ಸಮಾಧಾನ ಹೇಳುವುದು ಅನ್ನೋದೇ ಧ್ರುವ ಮುಂದಿರುವ ದೊಡ್ಡ ಸವಾಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply

Your email address will not be published. Required fields are marked *