Connect with us

Cinema

ಶಿಕ್ಷಕರ ದಿನಾಚರಣೆಯಂದು ಅಂಬಿಯನ್ನು ನೆನೆದ ಡಿ ಬಾಸ್

Published

on

ಬೆಂಗಳೂರು: ಡಿ ಬಾಸ್ ದರ್ಶನ್ ಕಲಿಯುಗದ ಕರ್ಣ ಅಂಬರೀಶ್ ಅವರನ್ನು ಎಷ್ಟು ಇಷ್ಟಪಡುತ್ತಿದ್ದರು ಎಂಬುದು ತಿಳಿದೇ ಇದೆ. ಅದೇ ರೀತಿ ಅಂಬರೀಶ್-ಸುಮಲತಾ ದಂಪತಿ ಸಹ ದಾಸನನ್ನು ತಮ್ಮ ಮನೆ ಮಗನಂತೆ ಕಾಣುತ್ತಾರೆ. ಹೀಗಾಗಿ ಹಿರಿಯರಿಗೆ ಗೌರವ ನೀಡುವ ಸಮಯ ಸಿಕ್ಕಾಗಲೆಲ್ಲ ಡಿ ಬಾಸ್ ಇವರನ್ನು ನೆನದು ಪೋಸ್ಟ್ ಹಾಕುತ್ತಾರೆ. ಅದೇ ರೀತಿ ಇದೀಗ ಶಿಕ್ಷಕರ ದಿನಾಚರಣೆಯಂದು ವಿಶೇಷ ಪೋಸ್ಟ್ ಹಾಕಿದ್ದಾರೆ.

ಶಿಕ್ಷಕರ ದಿನಾಚರಣೆ ಅಂಗವಾಗಿ ದರ್ಶನ್ ವಿಶೇಷ ಪೋಸ್ಟ್ ಹಾಕಿದ್ದು, ಈ ಮೂಲಕ ತಮ್ಮ ಜೀವನದಲ್ಲಿ ಪಾಠ ಕಲಿಸಿದ ಗುರುವಿನ ಸಮಾನರಾದ ಮಹತ್ವದ ವ್ಯಕ್ತಿಗಳನ್ನು ನೆನೆದಿದ್ದಾರೆ. ತಮ್ಮ ತಂದೆ, ತಾಯಿ ತುಗುದೀಪ ಶ್ರೀನಿವಾಸ್ ದಂಪತಿ ಹಾಗೂ ಅಂಬರೀಶ್- ಸುಮಲತಾ ದಂಪತಿಯ ಫೋಟೋ ಹಾಕಿ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

ಈ ಕುರಿತು ಸಾಲುಗಳನ್ನು ಬರೆದಿರುವ ಅವರು, ಹುಟ್ಟಿನಿಂದ ಸಾಯುವ ವರೆಗೂ ಸರಿಯಾದ ಮಾರ್ಗದರ್ಶನ ನೀಡಿ ನಮ್ಮನ್ನು ನಮ್ಮ ಗುರಿಯತ್ತ ಕೊಂಡೊಯ್ಯಲು ಶ್ರಮಿಸುವ ಶಿಕ್ಷಕರಿಗೆ, ಗುರು ಹಿರಿಯರಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹುಟ್ಟಿನಿಂದ ಸಾಯುವವರೆಗೂ ಸರಿಯಾದ ಮಾರ್ಗದರ್ಶನ ನೀಡಿ ನಮ್ಮನ್ನು ನಮ್ಮ ಗುರಿಯತ್ತ ಕೊಂಡೊಯ್ಯಲು ಶ್ರಮಿಸುವ ಶಿಕ್ಷಕರಿಗೆ, ಗುರು ಹಿರಿಯರಿಗೆ ಶಿಕ್ಷಕರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು 🙂

Posted by Darshan Thoogudeepa Srinivas on Saturday, September 5, 2020

ಗುರು, ಹಿರಿಯರನ್ನು ನೆನೆಯುವ ಸಂದರ್ಭ ಬಂದಾಗಲೆಲ್ಲ ಅವರ ತಂದೆ ತಾಯಿ ಹಾಗೂ ಅಂಬರೀಶ್- ಸುಮಲತಾರನ್ನು ಡಿ ಬಾಸ್ ನೆನೆಯುತ್ತಾರೆ. ಅವರ ಹುಟ್ಟುಹಬ್ಬದ ಸಂದರ್ಭದಲ್ಲೂ ಸಹ ವಿಶೇಷ ಸಾಲುಗಳ ಮೂಲಕ ಭಾವನಾತ್ಮಕವಾಗಿ ಶುಭಕೋರುತ್ತಾರೆ. ಸುಮಲತಾ ಅಂಬರೀಶ್ ಸಹ ದರ್ಶನ್ ಹುಟ್ಟುಹಬ್ಬಕ್ಕೆ ಮುದ್ದಿನ ಮಗ ಎಂದೇ ಸಂಬೋೀಧಿಸಿ ಶುಭಾಶಯ ತಿಳಿಸುತ್ತಾರೆ.

ಆಗಸ್ಟ್ 27ರಂದು ಸುಮಲತಾ ಅಂಬರೀಶ್ ಹುಟ್ಟುಹಬ್ಬದಂದು ವಿಶೇಷ ಪೋಸ್ಟ್ ಮೂಲಕ ದರ್ಶನ್ ಶುಭ ಕೋರಿದ್ದರು. ಮದರ್ ಇಂಡಿಯಾ ಸುಮಲತಾ ಅಂಬರೀಶ್ ಅಮ್ಮನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದರು. ಅದೇ ರೀತಿ ಸುಮಲತಾ ಅಂಬರೀಶ್ ಸಹ ಮಗ ಎಂದು ಹೇಳಿಯೇ ಹುಟ್ಟುಹಬ್ಬದ ಶುಭಾಶಯ ಕೋರುತ್ತಾರೆ.

“ಮದರ್ ಇಂಡಿಯಾ” Sumalatha Ambareesh ಅಮ್ಮರವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು.💐🎂

Posted by Darshan Thoogudeepa Srinivas on Wednesday, August 26, 2020

ದರ್ಶನ್ ಹಾಗೂ ಅಂಬರೀಶ್ ಕುಟುಂಬ ಪರಸ್ಪರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾರೆ. ಈ ಮೂಲಕ ತಮ್ಮ ಪ್ರೀತಿಯನ್ನು ಮೆರೆಯುತ್ತಾರೆ. ಅಂಬರೀಶ್ ಕುಟುಂಬದ ಮಗನಂತೆ ದರ್ಶನ್ ಇದ್ದಾರೆ. ಹೀಗಾಗಿ ದರ್ಶನ್‍ಗೆ ಅಂಬರೀಶ್ ಹಾಗೂ ಸುಮಲತಾ ಎಂದರೆ ಎಲ್ಲಿಲ್ಲದ ಪ್ರೀತಿ. ಇಂದು ಶಿಕ್ಷಕರ ದಿನಾಚರಣೆ ದಿನ ಸಹ ತಂದೆ ತಾಯಿ ಜೊತೆ ಅಂಬರೀಶ್ ಅವರನ್ನೂ ನೆನೆದಿದ್ದಾರೆ.

Click to comment

Leave a Reply

Your email address will not be published. Required fields are marked *