Connect with us

Bengaluru City

ನಾನಲ್ಲ, ಇವರು ನಿಜವಾದ ಸಾರಥಿ: ದರ್ಶನ್

Published

on

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಸರಳತೆ. ಕಷ್ಟ ಕಾಲದಲ್ಲಿ ಕೈ ಹಿಡಿದರನ್ನ ಚಕ್ರವರ್ತಿ ಮರೆಯಲ್ಲ ಅನ್ನೋ ಮಾತಿದೆ. ಈ ಮಾತುಗಳಿಗೆ ಸಾಕ್ಷಿ ಎಂಬಂತೆ ಎಷ್ಟೋ ಘಟನೆಗಳು ನಮ್ಮ ಮುಂದಿವೆ. ಇದೀಗ ತಮ್ಮನ್ನ ಶಾಲೆಗೆ ಕರೆದೊಯ್ಯುತ್ತಿದ್ದ ಸಾರಥಿಯನ್ನ ಭೇಟಿಯಾಗಿರುವ ದರ್ಶನ್, ಹಿರಿಯ ಸಾರಥಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಅಸಲಿ ಸಾರಥಿಯ ಫೋಟೋಗಳನ್ನ ಹಂಚಿಕೊಂಡಿರುವ ಯಜಮಾನ, ಸಾರಥಿಯಿಂದ ಇವತ್ತು ರಿಯಲ್ ಸಾರಥಿಯ ಭೇಟಿ. ನಾವು ಶಾಲೆಗೆ ತೆರಳುತ್ತಿದ್ದ ಕೆಎಸ್‍ಆರ್ಟಿಸಿಯ ರೂಟ್ ಬಸ್ ಚಾಲಕರಿವರು. 80ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಿಜವಾದ ಸಾರಥಿಯನ್ನ ಭೇಟಿಯಾಗಿ ಶುಭಾಶಯ ತಿಳಿಸಿ ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸರಳತೆ ಸಾಮ್ರಾಟ್ ನಮ್ಮ ಡಿ ಬಾಸ್ ಎಂದು ಕೊಂಡಾಡುತ್ತಿದ್ದಾರೆ. ಓರ್ವ ನೆಟ್ಟಿಗ ಅಂದು ಪ್ರಯಾಣಿಸುತ್ತಿದ್ದ ಬಸ್ ರೂಟ್ ನಂಬರ್ 24, ಇವರ ಹೆಸರು ಸುಂದರ್ ಅಂಕಲ್ ಅಲ್ವಾ ಎಂದು ಕಮೆಂಟ್ ಮಾಡಿದ್ದಾರೆ.

ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಿಡುಗಡೆಯಾಗಿ ಅಬ್ಬರಿಸುತ್ತಿದೆ. ಸಿನಿಮಾ ಬಿಡುಗಡೆಯಾದ ಮರುದಿನವೇ ಚಂದನವನದಲ್ಲಿ ಹೊಸ ದಾಖಲೆಯನ್ನ ಚಿತ್ರ ಬರೆದಿದೆ. ಚಿತ್ರದ ಯಶಸ್ಸಿನ ಬೆನ್ನಲ್ಲೇ ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದು, ಅಲ್ಲಿಯ ಗೋ ಶಾಲೆ ವೀಕ್ಷಿಸಿದ್ದರು.

Click to comment

Leave a Reply

Your email address will not be published. Required fields are marked *