Wednesday, 17th July 2019

ಕೊಡಗು ರಕ್ಷಣೆಗೆ ದರ್ಶನ್ ಮನವಿ- ಹರಿದು ಬಂತು ಸಹಾಯದ ಮಹಾಪೂರ

ಬೆಂಗಳೂರು: ಕೊಡಗು ಪ್ರವಾಹ ಪೀಡಿತ ಸಂತ್ರಸ್ತರಿಗೆ ಸಹಾಯ ಮಾಡುವಂತೆ ನಟ ದರ್ಶನ್ ತಮ್ಮ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದರು. ನೆಚ್ಚಿನ ನಾಯಕ ನಟನ ಮನವಿಗೆ ಕರಗಿ ದರ್ಶನ್ ಅಭಿಮಾನಿಗಳ ಸಂಘಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

ದರ್ಶನ್ ಅಭಿಮಾನಿಗಳು ಸಂಘ ಕುಣಿಗಲ್ ಮತ್ತು ದರ್ಶನ್ ತೂಗುದೀಪ ಅಭಿಮಾನಿಗಳು ಸಂಘ ಲಕ್ಷ್ಮೀಪುರ ತಂಡದ ಸದಸ್ಯರು ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಇವರು ತಮ್ಮ ಕೈಲಾದಷ್ಟು ಕೊಡಗು ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ್ದಾರೆ.

ದರ್ಶನ್ ಅಭಿಮಾನಿಗಳು ಅಪಾರ ಪ್ರಮಾಣದ ವಸ್ತುಗಳನ್ನು ಸಂಗ್ರಹಿಸಿದ್ದು, ಇನ್ನು ಕೆಲವರು ಸಹಾಯ ಮಾಡಲು ಮುಂದಾದರೆ ಅಂತಹವರಿಗೆ ವಿಳಾಸವನ್ನು ಕೂಡ ಟ್ವೀಟ್ ಮಾಡಿದ್ದಾರೆ. ಈಗಾಗಲೇ ಸಹಾಯ ಮಾಡಿದ್ದ ಅಭಿಮಾನಿಗಳಿಗೆ ಧನ್ಯವಾದಗಳನ್ನು ಸಹ ತಿಳಿಸಿದ್ದಾರೆ.

ನಿಮ್ಮ ವಸ್ತುಗಳನ್ನು ತಲುಪಿಸಬಹುದಾದ ವಿಳಾಸ
ತೂಗುದೀಪ ಔಟ್ ಡೋರ್ ಯುನಿಟ್ ಕಚೇರಿ, ವಿಶ್ವ ನಿವಾಸ. ನಂ 476/ಎ ಮತ್ತು 476/ಎ1, 15ನೇ ಕ್ಲಾಸ್ ಗೌರಿ ಲಂಕೇಶ್ ಮನೆಯ ಎದುರು, ಐಡಿಯಲ್ ಓಂ ಶಿಪ್, ರಾಜರಾಜೇಶ್ವರಿ ನಗರ ಬೆಂಗಳೂರು, ಕರ್ನಾಟಕ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- ಶ್ಯಾಂ ಗಜ : 9535452291

ನಟ ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್ ಮತ್ತು ನಟಿ ಹರ್ಷಿಕಾ ಪೂಣಚ್ಚ ಅವರು ಕೊಡಗು ಸಂತ್ರಸ್ತರಿಗೆ ಸಹಾಯ ಮಾಡುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ತನ್ನ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ನಟ ದರ್ಶನ್ ಅವರು, ನಾವು ಕೊಡಗು ಜನರಿಗಾಗಿ ಪ್ರಾರ್ಥನೆ ಮಾಡಿಕೊಳ್ಳೋಣ. ನಮ್ಮ ಪ್ರಾರ್ಥನೆ ಮತ್ತು ನಮ್ಮ ಬೆಂಬಲ ಅವರಿಗೆ ಬೇಕಾಗುತ್ತದೆ. ನಾವೆಲ್ಲರೂ ಅವರಿಗೆ ಸಹಾಯ ಮಾಡೋಣ ಎಂದು ಟ್ವೀಟ್ ಮಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *