Friday, 23rd August 2019

Recent News

ಅಂಕಲ್ ಪರ ಕ್ಯಾಂಪೇನ್ ಶುರು ಮಾಡಿದ್ರು ಚಿರಂಜೀವಿ ಸರ್ಜಾ

ಬೆಂಗಳೂರು: ಭಾರತೀಯ ಸಿನಿಮಾರಂಗದಲ್ಲಿ ನಟಿ ಶೃತಿ ಹರಿಹರನ್ ಮತ್ತು ಬುಹುಭಾಷಾ ನಟ ಅರ್ಜುನ್ ಸರ್ಜಾ ಅವರು ಮೀಟೂ ಆರೋಪದ ಸುದ್ದಿಯೇ ಹರಿದಾಡುತ್ತಿದೆ. ಈಗ ತಮ್ಮ ಅಂಕಲ್ ಅರ್ಜುನ್ ಸರ್ಜಾ ಅವರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಟ ಚಿರಂಜೀವಿ ಸರ್ಜಾ ಅವರು ಕ್ಯಾಂಪೇನ್ ಶುರು ಮಾಡಿದ್ದಾರೆ.

ಶೃತಿ ಹರಿಹರನ್ ಮೀಟೂ ಆರೋಪ ವಿಚಾರವಾಗಿ ನಟ ಚಿರಂಜೀವಿ ಸರ್ಜಾ ಟ್ವೀಟ್ ಅಭಿಯಾನವನ್ನು ಆರಂಭಿಸಿದ್ದಾರೆ. ಚಿರಂಜೀವಿ ಸರ್ಜಾ ಅವರು ತಮ್ಮ ಟ್ಟಿಟ್ಟರ್ ನಲ್ಲಿ “ಸ್ನೇಹಿತರೆ ನಾನು ಜೆಂಟಲ್‍ಮ್ಯಾನ್ ಅರ್ಜುನ್ ಸರ್ಜಾ ಅವರಿಗೆ ಬೆಂಬಲ ನೀಡುತ್ತೇನೆ, ನೀವು ಏನು ಹೇಳುತ್ತೀರಾ” ಎಂದು ಅರ್ಜುನ್ ಸರ್ಜಾ ಅವರ ಫೋಟೋ ಪೋಸ್ಟ್ ಮಾಡಿ, ಟ್ವೀಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಂಕಲ್ ಪರವಾಗಿ ಅಭಿಯಾನ ಶುರು ಮಾಡಿದ್ದಾರೆ.

ಚಿರಂಜೀವಿ ಸರ್ಜಾ ಅವರು ”#istandwithgentlemen” ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಕ್ಯಾಂಪೇನ್ ಶುರು ಮಾಡಿದ್ದಾರೆ. ಈ ರೀತಿ ಬರೆದು ಅವರು ಧೃವ, ಮೇಘನಾ, ಐಶ್ವರ್ಯ ಮತ್ತು ಅಂಜನಾ ಅರ್ಜುನ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಅವರು ಶುರುಮಾಡಿದ ಕ್ಯಾಂಪೇನ್ ಗೆ ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ವ್ಯಾಪಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಗುರುವಾರಷ್ಟೆ ಫಿಲಂ ಚೇಂಬರ್ ನಲ್ಲಿ ಹಿರಿಯ ನಟ ಅಂಬರೀಶ್ ಸೇರಿದಂತೆ ಹಲವರ ಸಹಭಾಗಿತ್ವದಲ್ಲಿ ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಅವರ ನಡುವೆ ಸಂಧಾನ ನಡೆಸಲಾಗಿತ್ತು. ಈ ವೇಳೆ ಅರ್ಜುನ್ ಸರ್ಜಾ ಅವರು, ನಾನು ಕಳೆದ 35ರಿಂದ 38 ವರ್ಷಗಳಿಂದ ಅಪಾರ ಗೌರವವನ್ನು ಹೊಂದಿದ್ದೇನೆ. ಇಂದು ನನಗೆ ಕರೆದರು ಹಾಗಾಗಿ ಬಂದಿದ್ದೇನೆ. ನನಗೆ ನೋವು ಆಗಿದ್ದರೆ, ಸುಮ್ಮನಿರುತ್ತಿದ್ದೆ. ನನ್ನನ್ನು ನಂಬಿದವರು, ಕುಟುಂಬ ಸದಸ್ಯರು ಕೇರಳ, ತಮಿಳುನಾಡು, ಆಂಧ್ರ ಕರ್ನಾಟಕದ ಅಭಿಮಾನಿಗಳು ನೊಂದಿದ್ದಾರೆ. ಹಾಗಾಗಿ ನಾನು ನ್ಯಾಯಾಲಯದ ಮೊರೆ ಹೋಗುತ್ತಿದ್ದೇನೆ ಅಂತ ತಿಳಿಸಿದ್ದಾರೆ.

 ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *