ನಾಮಪತ್ರ ಸಲ್ಲಿಸಿದ ನಟ ಬಾಲಯ್ಯ: ಹೆಂಡತಿ ಆಸ್ತಿಯೇ ಹೆಚ್ಚು

By
1 Min Read

ತೆಲುಗಿನ ಖ್ಯಾತ ನಟ ಬಾಲಯ್ಯ (Balayya) ನಿನ್ನೆ ನಾಮ ಪತ್ರ ಸಲ್ಲಿಸಿದ್ದಾರೆ. ಟಿಡಿಪಿ ಅಭ್ಯರ್ಥಿಯಾಗಿ ಈ ಬಾರಿ ಅವರು ಸ್ಪರ್ಧಿಸಿದ್ದಾರೆ. ಕರ್ನಾಟಕದ ಗಡಿಯ ಹಿಂದೂಪುರ ವಿಧಾನಸಭಾ ಕ್ಷೇತ್ರದಲ್ಲಿ ಅವರು ಗೆಲುವನ್ನು ಅರಸಿ ಹೊರಟಿದ್ದಾರೆ.

ಈಗಾಗಲೇ ಹಿಂದೂಪುರ (Hindupur) ಕ್ಷೇತ್ರದ ಹಾಲಿ ಶಾಸಕರೂ ಆಗಿರುವ ಬಾಲಯ್ಯ, ನಾಮಪತ್ರ ಸಲ್ಲಿಸಿದಾಗ ತಮ್ಮ ಆಸ್ತಿಯನ್ನೂ (Property) ಘೋಷಣೆ ಮಾಡಿದ್ದು, ತಮಗಿಂತಲೂ ಪತ್ನಿಯ ಆಸ್ತಿಯೇ ಹೆಚ್ಚಾಗಿರುವುದು ಕಂಡು ಬಂದಿದೆ. 9 ಕೋಟಿ ರೂಪಾಯಿ ಸಾಲವನ್ನು ತೋರಿಸಿದ್ದರೆ, 81 ಕೋಟಿ ರೂಪಾಯಿ ಆಸ್ತಿಯನ್ನು ಬಾಲಯ್ಯ ಹೊಂದಿದ್ದಾರೆ.

 

ಬಾಲಯ್ಯ ಅವರ ಪತ್ನಿ ವಸುಂಧರಾ 140 ಕೋಟಿ ರೂಪಾಯಿಯ ಆಸ್ತಿ ಹೊಂದಿದ್ದು, ಬಾಲಯ್ಯ ಪುತ್ರ ಮೋಕ್ಷಜ್ಞ ಹೆಸರಿನಲ್ಲಿ 58 ಕೋಟಿ ರೂಪಾಯಿ ಆಸ್ತಿ ಇದೆ. ಒಟ್ಟಾರೆ ಬಾಲಯ್ಯ ಅವರ ಕುಟುಂಬದ ಆಸ್ತಿ 280.64 ಕೋಟಿ ರೂಪಾಯಿ ಘೋಷಣೆ ಆಗಿದೆ.

Share This Article
Exit mobile version