Connect with us

Bengaluru City

‘ದಿ ಡರ್ಟಿ ಪಿಕ್ಚರ್’ ಚಿತ್ರದ ನಟಿ ಆರ್ಯಾ ಬ್ಯಾನರ್ಜಿ ಶವವಾಗಿ ಪತ್ತೆ

Published

on

– ಅನುಮಾನ ಹುಟ್ಟಿಸಿದೆ 35 ವರ್ಷದ ನಟಿಯ ಸಾವು

ಮುಂಬೈ: ತಮಿಳು ಧಾರವಾಹಿಯ ನಟಿ ವಿಜೆ ಚಿತ್ರಾ ಮೃತಪಟ್ಟ ಬೆನ್ನಲ್ಲೇ ಇದೀಗ ಬೆಂಗಾಳಿ ನಟಿ ಆರ್ಯ ಬ್ಯಾನರ್ಜಿ ಮೃತದೇಹ ಅವರ ಮನೆಯಲ್ಲಿ ಪತ್ತೆಯಾಗಿದೆ.

ಮೃತ ನಟಿಯನ್ನು ಆರ್ಯಾ ಬ್ಯಾನರ್ಜಿ(35) ಎಂದು ಗುರುತಿಸಲಾಗಿದೆ. ಇವರು ದಿವಂಗತ ಸಿತಾರ್ ವಾದಕ ಪಂಡಿತ್ ನಿಖಿಲ್ ಬ್ಯಾನರ್ಜಿಯ ಪುತ್ರಿ. 2010ರಲ್ಲಿ ಲವ್ ಸೆಕ್ಸ್ ಔರ್ ದೋಖಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಆರ್ಯಾ 2011ರಲ್ಲಿ ಡರ್ಟಿ ಪಿಕ್ಟರ್ ನಲ್ಲಿ ನಟಿಸಿದ್ದರು. ಬೆಂಗಾಳಿ ನಟಿಯಾದರೂ ಈಕೆ ಅನೇಕ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಚಿರಪರಿಚಿತರಾಗಿದ್ದರು.

ಆರ್ಯಾ ಮೃತದೇಹದ ಮೇಲೆ ಯಾವುದೇ ಗಾಯಗಳಾದ ಗುರುತುಗಳಿಲ್ಲ. ಕೋಲ್ಕತ್ತಾದಲ್ಲಿರುವ ದೇವದತ್ತ ಎಂಬ ಹೆಸರಿನ ಮನೆಯಲ್ಲಿ ಈಕೆ ಒಂಟಿಯಾಗಿದ್ದರು. ಸದ್ಯ ನೆಲದ ಮೇಲೆ ಮಲಗಿದ್ದ ರೀತಿಯಲ್ಲಿ ಆರ್ಯಾ ಶವ ಪತ್ತೆಯಾಗಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ಒಳಗೆ ಹೋದಾಗ ನೆಲದ ಮೇಲೆ ರಕ್ತದ ಕಲೆಗಳು ಬಿದ್ದಿರುವುದು ಬೆಳಕಿಗೆ ಬಂದಿದೆ. ಘಟನೆಯ ನಿಖರ ಕಾರಣ ಮರಣೊತ್ತರ ವದಿ ಬಂದ ಬಳಿಕವಷ್ಟೇ ಗೊತ್ತಾಗಬೇಕಿದೆ ಎಂದು ಲೇಕ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಹಾಮಾರಿ ಕೊರೊನಾ ವೈರಸ್ ನಿಂದ ಲಾಕ್ ಡೌನ್ ಆಗಿದ್ದ ಸಂದರ್ಭದಲ್ಲಿ ಆಕೆ ಮನೆಯಲ್ಲಿ ಒಬ್ಬಳೇ ಇದ್ದರು. ಇತ್ತೀಚೆಗೆ ಆ್ಯಪ್ ಮೂಲಕ ಆಹಾರ ಆರ್ಡರ್ ಮಾಡಿ ತರಿಸಿಕೊಳ್ಳುತ್ತಿದ್ದರು. ಅಲ್ಲದೆ ಮನೆಯಲ್ಲಿ ಸಾಕಿದ್ದ ನಾಯಿ ಜೊತೆ ತಮ್ಮ ಸಮಯ ಕಳೆಯುತ್ತಿದ್ದರು. ಈಕೆ ಯಾರೊಂದಿಗೂ ಬೆರೆಯುತ್ತಿರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ನಟು ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜನಪ್ರಿಯ ಸೀರಿಯಲ್ ನಟಿ ವಿಜೆ ಚಿತ್ರಾ ಆತ್ಮಹತ್ಯೆ 

ಶುಕ್ರವಾಗಿ ಬೆಳಗ್ಗಿನಿಂದ ಮನೆಗೆಲಸದವರು ನಟಿಗೆ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಅಲ್ಲದೆ ಮನೆ ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿರಲಿಲ್ಲ. ಹೀಗಾಗಿ ಪೊಲೀಸರು ನಟಿ ಮೊಬೈಲ್ ಪರಿಶೀಲನೆ ನಡೆಸಿದ್ದಾರೆ. ನಟಿಗೆ ಏನಾದರೂ ಸಮಸ್ಯೆ ಕಾಡಿತ್ತಾ ಹಾಗೂ ಆಕೆ ಕೊನೆಯ ಬಾರಿಗೆ ಆಹಾರ ಆರ್ಡರ್ ಯಾವಾಗ ಮಾಡಿದ್ದು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಫ್ರೆಶ್ ಆಗಿ ಬರ್ತೀನಿ ಅಂತ ಹೋದವ್ಳು ಮತ್ತೆ ಬರಲೇ ಇಲ್ಲ- ನಟಿ ಭಾವಿ ಪತಿ 

ಲವ್ ಸೆಕ್ಸ್ ಔರ್ ದೋಖಾ ಹಾಗೂ ದಿ ಡರ್ಟಿ ಪಿಕ್ಟರ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಲ್ಲದೇ ಆರ್ಯಾ ಅವರು ಅನುಪಮ್ ಖೇರ್ ಅವರ ನಟನಾ ಶಾಲೆಯಲ್ಲಿ ಕೋರ್ಸ್ ಮಾಡಿದ್ದರು. ಇನ್ನು ಮುಂಬೈನಲ್ಲಿದ್ದ ವೇಲೆ ಹಲವಾರು ಮಾಡೆಲಿಂಗ್ ಕಾರ್ಯಕ್ರಮಗಳನ್ನು ಕೂಡ ಆರ್ಯಾ ನಿರ್ವಹಿಸಿದ್ದರು. ಸದ್ಯ ನಟಿಯ ಸಾವನ್ನಪ್ಪಿರುವುದು ಅಚ್ಚರಿಯ ಜೊತೆಗೆ ಹಲವು ಅನುಮಾನಗಳಿಗೆ ಎಡಮಾಡಿಕೊಟ್ಟಿದೆ.

Click to comment

Leave a Reply

Your email address will not be published. Required fields are marked *

www.publictv.in