Saturday, 16th November 2019

ಮದ್ವೆ ನಿರಾಕರಿಸಿದ್ರೆ ಆ್ಯಸಿಡ್ ಹಾಕ್ತೀನಿ – ಪಾಗಲ್ ಪ್ರೇಮಿಯಿಂದ ಯುವತಿಗೆ ಬೆದರಿಕೆ

ಬೆಂಗಳೂರು: ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಆ್ಯಸಿಡ್ ಎರಚುವ ಬೆದರಿಕೆ ಹಾಕಿದ ಘಟನೆ ನಗರದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಫೈಸಲ್ ಬಂಧಿತ ಪಾಗಲ್ ಪ್ರೇಮಿ. ಯುವತಿಯು ಬಿ.ಫಾರ್ಮ್ ವ್ಯಾಸಂಗ ಮಾಡುತ್ತಿದ್ದು, ತಾಯಿ ಹಾಗೂ ಸಹೋದರನ ಜೊತೆ ಜೆ.ಜೆ.ನಗರದಲ್ಲಿ ವಾಸುತ್ತಿದ್ದಾಳೆ.

ಫೈಸಲ್ ಯುವತಿಯ ಸಂಬಂಧಿಕ. ಹೀಗಾಗಿ ಕಳೆದ ಫೆಬ್ರವರಿಯಿಂದ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಆದರೆ ಮಾದಕ ವ್ಯಸನಿ ಆಗಿರುವ ಫೈಸಲ್‍ನನ್ನು ಮದುವೆಯಾಗಲು ಯುವತಿ ನಿರಾಕರಿಸಿದ್ದಳು. ಅಷ್ಟೇ ಅಲ್ಲದೆ ಕುಟುಂಬ ಸಂಬಂಧಿ ಎಂಬ ಕಾರಣಕ್ಕೆ ವಾರ್ನಿಂಗ್ ಮಾಡಿ ಸುಮ್ಮನಿದ್ದಳು. ಇಷ್ಟಕ್ಕೆ ಸುಮ್ಮನೆ ಬಿಡದ ಫೈಸಲ್ ರೊಚ್ಚಿಗೆದ್ದು ಯುವತಿಯ ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಮನೆಗೆ ಹೋಗಿ ರಂಪಾಟ ನಡೆಸಿದ್ದ. ಮನೆ ಹಾಗೂ ವಾಹನದ ಮೇಲೆ ಕಲ್ಲು ತೂರಿ ಜಖಂಗೊಳಿಸಿದ್ದ.

ಫೈಸಲ್ ವರ್ತನೆಯಿಂದ ಯುವತಿಯು ಜೆ.ಜೆ ನಗರ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಾಗಲ್ ಪ್ರೇಮಿ ಫೈಸಲ್‍ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *