Belgaum
ಪಾನ್ಶಾಪ್ನಲ್ಲಿ ಅಫೀಮು ಮಾರಾಟ- ಮೂವರ ಬಂಧನ

– 1.15 ಕೆ.ಜಿ.ಅಫೀಮು ವಶಕ್ಕೆ
ಬೆಳಗಾವಿ: ಸಿಇಎನ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಫೀಮು ಮಾರಾಟ ಮಾಡ್ತಿದ್ದ ಮೂವರನ್ನು ಬಂಧಿಸಿದ್ದಾರೆ.
ನಗರದ ಪಾನ್ಶಾಪ್ನಲ್ಲಿ ಅಫೀಮು ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಇಎನ್ ಪೊಲೀಸರು, ಆರೋಪಿಗಳಾದ ಬರಖತ್ಖಾನ್, ಕಮಲೇಶ್ ಬೇನಿವಾಲಾ, ಸರವನ್ ಅಸನೋಯಿಯವರನ್ನು ಬಂಧಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದ ರಾಜಸ್ಥಾನ ದಾಬಾ ಬಳಿ ಪಾನ್ಶಾಪ್ನಲ್ಲಿ ಮಾರಾಟ ಮಾಡುತ್ತಿದ್ದರು. ಒಟ್ಟು 20 ಲಕ್ಷ ರೂಪಾಯಿ ಮೌಲ್ಯದ 1.15 ಕೆ.ಜಿ. ಅಫೀಮನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬಂಧಿತ ಮೂವರು ಆರೋಪಿಗಳು ರಾಜಸ್ಥಾನ ಮೂಲದವರಾಗಿದ್ದು, ಬೆಳಗಾವಿಯಲ್ಲಿ ವಾಸವಿದ್ದರು. ರಾಜಸ್ಥಾನ ಮೂಲದ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿಕೊಂಡು ಆರೋಪಿಗಳು ಅಫೀಮು ಸಪ್ಲೈ ಮಾಡುತ್ತಿದ್ದರು.
ಈ ಗ್ಯಾಂಗ್ ಲಾರಿಗಳ ಮೂಲಕ ರಾಜಸ್ಥಾನದಿಂದ ಬೆಳಗಾವಿಗೆ ಅಫೀಮು ತರುತ್ತಿತ್ತು. ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
