Karnataka
ಟ್ರ್ಯಾಕ್ಟರ್ ಟ್ರೈಲರ್ ಮೇಲೆ ಬಿದ್ದ ಎಂಜಿನ್- ಚಾಲಕ ಸಾವು

ಯಾದಗಿರಿ: ಟ್ರ್ಯಾಕ್ಟರ್ ಟ್ರೈಲರ್ ಮೇಲೆ ಎಂಜಿನ್ ಬಿದ್ದು ಚಾಲಕ ದಾರಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲೆಯ ಸುರಪುರ ತಾಲೂಕಿನ ಕವಡಿಮಟ್ಟಿ ಗ್ರಾಮದ ಬಳಿ ಘಟನೆ ನಡೆದಿದ್ದು, ಟ್ರ್ಯಾಕ್ಟರ್ ಚಾಲಕ ನಿಂಗಪ್ಪ ಕೊಂಗಂಡಿ(24) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ಮಣ್ಣು ಹೇರಿಕೊಂಡಿದ್ದ ಟ್ರ್ಯಾಕ್ಟರ್ ದಿಬ್ಬ ಏರುವಾಗ ಎಂಜಿನ್ ಟ್ರೈಲರ್ ಮೇಲೆ ಬಿದಿದೆ. ಮಧ್ಯೆ ಚಾಲಕ ಸಿಕ್ಕಿ ಹಾಕಿಕೊಂಡಿದ್ದು, ಬಲವಾಡ ಹೊಡೆತ ಬಿದ್ದಿದೆ. ಹೀಗಾಗಿ ಚಾಲಕ ಸ್ಥಳದಲ್ಲೇ ಸಾವನ್ನಪಿದ್ದಾನೆ. ತಕ್ಷಣವೇ ಸ್ಥಳೀಯರು ತೆರಳಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಚಾಲಕ ಸಾವನ್ನಪ್ಪಿದ್ದಾನೆ.
ಮಣ್ಣು ತುಂಬಿಕೊಂಡು ಕವಡಿಮಟ್ಟಿ ಗ್ರಾಮಕ್ಕೆ ಹೊರಟಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿದ್ದು, ಪರೀಶಿಲನೆ ನಡೆಸಿದ್ದಾರೆ. ಚಾಲಕನ ಮೃತದೇಹವನ್ನು ಸುರಪುರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
