Connect with us

Davanagere

ಶಾಲಾ ಮಕ್ಕಳಿದ್ದ ಟಾಟಾ ಏಸ್, ಹಾಲಿನ ಡೈರಿ ವಾಹನದ ನಡುವೆ ಅಪಘಾತ- 9 ಮಕ್ಕಳಿಗೆ ಗಾಯ

Published

on

ದಾವಣಗೆರೆ: ಶಾಲಾ ಮಕ್ಕಳಿದ್ದ ಟಾಟಾ ಏಸ್ ಹಾಗೂ ಹಾಲಿನ ಡೈರಿ ವಾಹನದ ನಡುವೆ ಅಪಘಾತವಾಗಿ 9 ಶಾಲಾ ಮಕ್ಕಳು ಗಂಭೀರವಾಗಿ ಗಾಯಗೊಂಡ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೋಪಳಾಪುರ ಗ್ರಾಮದ ಬಳಿ ನಡೆದಿದೆ.

ಗೋಪಳಾಪುರ ಗ್ರಾಮದಿಂದ ಸೊಕ್ಕೆ ಗ್ರಾಮದಲ್ಲಿರುವ ಶಾಲೆಗೆ ಮಕ್ಕಳು ಟಾಟಾ ಏಸ್‍ನಲ್ಲಿ ಇಂದು ಬೆಳಿಗ್ಗೆ ಹೋಗುತ್ತಿದ್ದರು. ಟಾಟಾ ಏಸ್ ಚಾಲಕನ ಅಜಾಗರುಕತೆಯಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

ಮಕ್ಕಳು ಸೊಕ್ಕೆ ಗ್ರಾಮದ ಶ್ರೀ ಮಾರುತಿ ಗ್ರಾಮಾಂತರ ಪ್ರೌಢ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ಜಗಳೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.