Friday, 17th August 2018

Recent News

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಬಿಡಿ ಗುಡ್‍ಬೈ

ಕೇಪ್‍ಟೌನ್: ಆರ್ ಸಿಬಿ ಸ್ಫೋಟಕ ಆಟಗಾರ ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ ಎಲ್ಲ  ಮಾದರಿಯ ಅಂತಾರಾಷ್ಟ್ರೀಯ  ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

ಈ ಬಾರಿಯ ಐಪಿಎಲ್‍ನಲ್ಲಿ ಆರ್ ಸಿಬಿ ತಂಡ ಪ್ಲೇ ಆಫ್‍ಗೆ ಅರ್ಹತೆ ಪಡೆಯಲು ವಿಫಲವಾದ ಬೆನ್ನಲ್ಲೇ ಡಿ ವಿಲಿಯರ್ಸ್ ಹಠಾತ್ ಎಂಬಂತೆ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇಲ್ಲಿಯವರೆಗೂ ನನ್ನನ್ನು ಪ್ರೋತ್ಸಾಹಿಸಿದ ಎಲ್ಲ ಅಭಿಮಾನಿಗಳಿಗೆ ಅವರು ಧನ್ಯವಾದವನ್ನು ತಿಳಿಸಿದ್ದಾರೆ.

1984ರಲ್ಲಿ ಜನಿಸಿದ ಎಬಿಡಿ 2004 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಆಡಿದ್ದರು. ಇದೂವರೆಗೂ ಒಟ್ಟು 114 ಟೆಸ್ಟ್ ಆಡಿರುವ ಎಬಿಡಿ 191 ಇನ್ನಿಂಗ್ಸ್ ನಿಂದ 8765 ರನ್ ಹೊಡೆದಿದ್ದಾರೆ.

2005ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯವಾಡಿದ್ದ ಡಿವಿಲಿಯರ್ಸ್ ಇದೂವರೆಗೆ 228 ಏಕದಿನ ಪಂದ್ಯಗಳ 218 ಇನ್ನಿಂಗ್ಸ್ ನಿಂದ ಒಟ್ಟು 9577 ರನ್ ಸಿಡಿಸಿದ್ದಾರೆ. 78 ಟಿ20 ಪಂದ್ಯವಾಡಿರುವ ಎಬಿಡಿ 75 ಇನ್ನಿಂಗ್ಸ್ ಗಳಿಂದ 1672 ರನ್ ಗಳಿಸಿದ್ದಾರೆ. ಐಪಿಎಲ್ ಕೊನೆಯ ಪಂದ್ಯವನ್ನು ಮೇ 19 ರಂದು ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಿದ್ದರು.

 

Thanks to all our fans for always standing right behind us! #RCB

A post shared by AB de Villiers (@abdevilliers17) on

Leave a Reply

Your email address will not be published. Required fields are marked *