Connect with us

Latest

ವೀಡಿಯೋ: ಹೈ ಜೋಶ್ ನಲ್ಲಿ ಯೋಧರಿಗೆ ಸೆಲ್ಯೂಟ್ ಹೊಡೆದು ನೆಟ್ಟಿಗರ ಮನ ಗೆದ್ದ ಪೋರ!

Published

on

ಲೇಹ್: ಇಂಡೋ-ಟಿಬೇಟಿಯನ್ ಗಡಿಯಲ್ಲಿ ಸೈನಿಕರು ಹೋಗುತ್ತಿದ್ದ ವೇಳೆ ಲಡಾಖ್ ನ ಪುಟ್ಟ ಪೋರನೊಬ್ಬ ಹೈ ಜೋಶ್ ನಲ್ಲಿ ಸೆಲ್ಯೂಟ್ ಹೊಡೆದು ನೆಟ್ಟಿಗರ ಮನ ಗೆದ್ದಿದ್ದಾನೆ.

ಹೌದು. ಪುಟ್ಟ ಬಾಲಕ ಸೆಲ್ಯೂಟ್ ಹೊಡೆಯುತ್ತಿರುವುನ್ನು ಸೈನಿಕರೊಬ್ಬರು ವೀಡಿಯೋ ಮಾಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಈ ಬಾಲಕ ಮುಂದೆ ಯೋಧನಾಗುತ್ತಾನೆ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

ಬಾಲಕನ ವೀಡಿಯೋವನ್ನು ಐಟಿಬಿಪಿ ಟ್ವಿಟ್ಟರ್ ಅಕೌಂಟಿನಿಂದ ಶೇರ್ ಮಾಡಲಾಗಿದ್ದು, ಸಾವಿರಾರು ಲೈಕ್ಸ್ ಹಾಗೂ ಕಮೆಂಟ್ ಗಳು ಬಂದಿವೆ. ನಮಗ್ಯಾಲ್ ಹೆಸರಿನ ಬಾಲಕ ಲಡಾಖ್ ನ ಚುಶುಲ್ ಎಂಬಲ್ಲಿ ರಸ್ತೆ ಬದಿಯಲ್ಲಿ ಬಂದು ನಿಂತಿದ್ದಾನೆ. ಇದೇ ದಾರಿಯಲ್ಲಿ ಪೊಲೀಸ್ ಸಿಬ್ಬಂದಿ ತೆರಳುತ್ತಿದ್ದರು. ಈ ವೇಳೆ ಬಾಲಕ ಅವರಿಗೆ ಸೆಲ್ಯೂಟ್ ಹೊಡೆಯುತ್ತಾನೆ. ಅಲ್ಲದೆ ಅವರ ಕಮಾಂಡ್ಸ್ ಗಳನ್ನು ಪಾಲಿಸಿದ್ದಾನೆ.

ಈ ವೀಡಿಯೋವನ್ನು ಶೇರ್ ಮಾಡಿಕೊಂಡಿರುವ ಐಟಿಬಿಪಿ, ಸೆಲ್ಯೂಟ್! ಲಡಾಖ್ ನ ಚುಶುಲ್ ನಲ್ಲಿರುವ ಸ್ಥಳೀಯ ಪುಟ್ಟ ಕಂದಮ್ಮ ನಮಗ್ಯಾಲ್ ಅವರ ಮುಂದೆ ಹೋಗುತ್ತಿರುವ ಸೈನಿಕರಿಗೆ ಸೆಲ್ಯೂಟ್ ಹೊಡೆಯುತ್ತಾರೆ. ಅತ್ಯಂತ ಉತ್ಸಾಹಭರಿತವಾಗಿ ಹೆಚ್ಚಿನ ಜೋಶ್ ನೊಂದಿಗೆ ಸೆಲ್ಯೂಟ್ ಹೊಡೆಯುತ್ತಿರುವುದನ್ನು ಅಕ್ಟೋಬರ್ 8ರಂದು ಐಟಿಬಿಪಿ ಅಧಿಕಾರಿಯೊಬ್ಬರು ಸೆರೆಹಿಡಿದ್ದಾರೆ ಎಂದು ಬರೆದುಕೊಳ್ಳಲಾಗಿದೆ.

ಐಟಿಬಿಪಿ ಈ ವೀಡಿಯೋವನ್ನು ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಇದೀಗ 63 ಸಾವಿರ ಬಾರಿ ವೀಕ್ಷಣೆಯಾಗಿದೆ. 2 ಸಾವಿರಕ್ಕೂ ಅಧಿಕರ ಬಾರಿ ರಿ-ಟ್ವೀಟ್ ಮಾಡಲಾಗಿದೆ. ಬಾಲಕನ ಮುಗ್ಧ ಮನಸ್ಥಿತಿಗೆ ನೆಟ್ಟಿಗು ಫಿದಾ ಆಗಿದ್ದಾರೆ. ಸರಿಯಾಗಿ ನಮಸ್ಕರಿಸಲು ಕಲಿಯುವ ಮಗುವಿನ ಉತ್ಸಾಹ ಹಾಗೂ ಶಶಸ್ತ್ರ ಪಡೆಗಳ ಮೇಲಿನ ಗೌರವದಿಂದಾಗಿ ಜನ ಪ್ರಭಾವಿತರಾಗಿದ್ದಾರೆ.

ಈ ಮುದ್ದಾದ ಬಾಲಕನಿಂದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಸೈನಿಕರ ಮೇಲಿನ ಗೌರವ ಹೆಚ್ಚಾಗುವಂತೆ ಮಾಡಿದೆ. ಇದು ನಿಜಕ್ಕೂ ಗಮನಾರ್ಹವಾಗಿದೆ ಜೈ ಹಿಂದ್ ಅಂತ ಟ್ವಿಟ್ಟರ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in