ಬ್ರೆಡ್‌ನಿಂದಲೂ ಮಾಡ್ಬೋದು ಟೇಸ್ಟಿ ಸ್ಪ್ರಿಂಗ್ ರೋಲ್

Advertisements

ಹೆಚ್ಚಿನವರು ಬೇಕರಿಗಳಲ್ಲಿ ತಯಾರಿಸುವ ಸ್ಪ್ರಿಂಗ್ ರೋಲ್‌ಗಳನ್ನು ಇಷ್ಟಪಡುತ್ತಾರೆ. ಆದರೆ ಅದನ್ನು ಮನೆಯಲ್ಲಿ ಮಾಡುವುದು ಸ್ವಲ್ಪ ರಗಳೆ ಎನಿಸಬಹುದು. ಏಕೆಂದರೆ ಸ್ಪ್ರಿಂಗ್ ರೋಲ್‌ನ ಶೀಟ್‌ಗಳನ್ನು ತಯಾರಿಸುವುದು ಸ್ವಲ್ಪ ಕಷ್ಟ. ಆದರೆ ಬ್ರೆಡ್‌ಗಳನ್ನು ಸ್ಪ್ರಿಂಗ್ ರೋಲ್‌ಗಳ ಶೀಟ್ ಆಗಿ ಬಳಸಿದರೆ ಹೇಗಿರುತ್ತೆ ಅಂತ ಒಮ್ಮೆ ಯೋಚನೆ ಮಾಡಿದ್ದೀರಾ? ಸ್ಪ್ರಿಂಗ್ ರೋಲ್ ಮಾಡುವ ವಿಧಾನವನ್ನು ಇದು ಸುಲಭಗೊಳಿಸುತ್ತೆ ಮಾತ್ರವಲ್ಲ ಅಷ್ಟೇ ರುಚಿಕರವಾಗಿಸುತ್ತದೆ. ಬ್ರೆಡ್‌ನಿಂದ ಸ್ಪ್ರಿಂಗ್ ರೋಲ್ ಮಾಡುವ ವಿಧಾನ ಇಲ್ಲಿದೆ.

Advertisements

ಬೇಕಾಗುವ ಪದಾರ್ಥಗಳು:
ಸ್ಟಫಿಂಗ್ ತಯಾರಿಸಲು:
ಎಣ್ಣೆ – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 2
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 2 ಎಸಳು
ಹೆಚ್ಚಿದ ಸ್ಪ್ರಿಂಗ್ ಆನಿಯನ್(ಹಸಿರು ಈರುಳ್ಳಿ) – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ
ಕತ್ತರಿಸಿದ ಬೀನ್ಸ್- 5
ತುರಿದ ಕ್ಯಾರೆಟ್ – 1
ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಮ್ – ಅರ್ಧ
ವಿನೆಗರ್ – 2 ಟೀಸ್ಪೂನ್
ಸೋಯಾ ಸಾಸ್ – 2 ಟೀಸ್ಪೂನ್
ಚಿಲ್ಲಿ ಸಾಸ್ – 1 ಟೀಸ್ಪೂನ್
ಕಾಳುಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಣ್ಣಗೆ ಹೆಚ್ಚಿದ ಎಲೆಕೋಸು – 2 ಕಪ್
ಸ್ಲರಿ ತಯಾರಿಸಲು:
ಮೈದಾ ಹಿಟ್ಟು – ಅರ್ಧ ಕಪ್
ಕಾರ್ನ್ ಫ್ಲೋರ್ – ಅರ್ಧ ಕಪ್
ಕಾಳುಮೆಣಸಿನ ಪುಡಿ – ಕಾಲು ಟೀಸ್ಪೂನ್
ಉಪ್ಪು – ಕಾಲು ಟೀಸ್ಪೂನ್
ನೀರು – ಮುಕ್ಕಾಲು ಕಪ್
ಇತರ ಪದಾರ್ಥಗಳು:
ಬ್ರೆಡ್
ಕಾರ್ನ್ ಫ್ಲೇಕ್ಸ್ (ಲೇಪನಕ್ಕಾಗಿ)
ಎಣ್ಣೆ (ಹುರಿಯಲು) ಇದನ್ನೂ ಓದಿ: ಎಷ್ಟೊಂದು ರುಚಿಕರ ಆಲೂ ಟಿಕ್ಕಿ ಕಬಾಬ್

Advertisements

ಮಾಡುವ ವಿಧಾನ:
* ಮೊದಲಿಗೆ ಸ್ಟಫಿಂಗ್ ತಯಾರಿಸಲು ದೊಡ್ಡ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಮೆಣಸಿನಕಾಯಿ, ಬೆಳ್ಳುಳ್ಳಿ, ಸ್ಪ್ರಿಂಗ್ ಆನಿಯನ್ ಸೇರಿಸಿ ಚೆನ್ನಾಗಿ ಹುರಿಯಿರಿ.
* ಈಗ ಬೀನ್ಸ್, ಕ್ಯಾರೆಟ್, ಕ್ಯಾಪ್ಸಿಕಂ ಹಾಕಿ ಕುರುಕಲಾಗುವವರೆಗೆ ಹುರಿಯಿರಿ.
* ಅದಕ್ಕೆ ವಿನೆಗರ್, ಸೋಯಾ ಸಾಸ್, ಚಿಲ್ಲಿ ಸಾಸ್, ಕಾಳುಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಬೆರೆಯುವವರೆಗೆ ಹುರಿಯಿರಿ.
* ಕೊನೆಯಲ್ಲಿ ಎಲೆಕೋಸನ್ನು ಸೇರಿಸಿ ಹೆಚ್ಚಿನ ಉರಿಯಲ್ಲಿ ಹುರಿಯಿರಿ. ತರಕಾರಿಯ ಸ್ಟಫಿಂಗ್ ಸಿದ್ದವಾಗಿದ್ದು ಅದನ್ನು ಆರಲು ಪಕ್ಕಕ್ಕಿಡಿ.
* ಈಗ ಸ್ಲರಿ ತಯಾರಿಸಲು ಒಂದು ಬಟ್ಟಲಿನಲ್ಲಿ ಮೈದಾ, ಕಾರ್ನ್ ಫ್ಲೋರ್, ಕಾಳುಮೆಣಸಿನ ಪುಡಿ ಮತ್ತು ಉಪ್ಪು ತೆಗೆದುಕೊಳ್ಳಿ.
* ಅದಕ್ಕೆ ನೀರನ್ನು ಸೇರಿಸಿ ನಯವಾದ ಸ್ಲರಿಯನ್ನು ತಯಾರಿಸಿ ಬದಿಗಿಡಿ. ಇದನ್ನೂ ಓದಿ: ಬಾಳೆಹಣ್ಣಿನ ರವಾ ಫ್ರೈ ಒಮ್ಮೆ ನೀವೂ ಟ್ರೈ ಮಾಡಿ

Advertisements

* ಈಗ ಬ್ರೆಡ್ ಸ್ಲೈಸ್ ತೆಗೆದುಕೊಂಡು ಬದಿಗಳನ್ನು ಕತ್ತರಿಸಿ.
* ಅದನ್ನು ತೆಳುವಾಗಿಸಲು ಲಟ್ಟಣಿಗೆಯಿಂದ ಸ್ವಲ್ಪ ಲಟ್ಟಿಸಿ.
* ಈಗ ಸಿದ್ಧಪಡಿಸಿದ ಸ್ಟಫಿಂಗ್ ಅನ್ನು 1 ಟೀಸ್ಪೂನ್‌ನಷ್ಟು ತೆಗೆದುಕೊಂಡು ಬ್ರೆಡ್‌ನ ಮಧ್ಯದಲ್ಲಿ ಇರಿಸಿ. ಬ್ರೆಡ್‌ನ ಬದಿಗಳಲ್ಲಿ ಸ್ವಲ್ಪ ಸ್ವಲ್ಪವೇ ಸ್ಲರಿಯನ್ನು ಹಚ್ಚಿ, ಬ್ರೆಡ್ ಅನ್ನು ಅರ್ಧಕ್ಕೆ ಮಡಚಿ.
* ಬ್ರೆಡ್ ಅನ್ನು ಅರ್ಧಕ್ಕೆ ಮಡಚಿದ ಬಳಿಕ ಸಂಪೂರ್ಣವಾಗಿ ಒಮ್ಮೆ ಸ್ಲರಿಯಲ್ಲಿ ಅದ್ದಿ, ಪುಡಿ ಮಾಡಿದ ಕಾರ್ನ್ ಫ್ಲೇಕ್ಸ್‌ನಲ್ಲಿ ರೋಲ್ ಮಾಡಿ. ಇದರಿಂದ ಸ್ಪ್ರಿಂಗ್ ರೋಲ್ ಕುರುಕಲಾಗುತ್ತದೆ.
* ಈಗ ಬಿಸಿ ಎಣ್ಣೆಯಲ್ಲಿ ರೋಲ್ ಅನ್ನು ಡೀಪ್ ಫ್ರೈ ಮಾಡಿ. ಗೋಲ್ಡನ್ ಬ್ರೌನ್ ಆಗುವವರೆಗೆ ಗರಿಗರಿಯಾಗಿ ಹುರಿಯಿರಿ.
* ಈಗ ಟೇಸ್ಟಿ ಸ್ಪ್ರಿಂಗ್ ರೋಲ್ ತಯಾರಾಗಿದ್ದು, ಅದನ್ನು ಸಾಸ್‌ನೊಂದಿಗೆ ಸವಿಯಿರಿ.

Live Tv

Advertisements
Exit mobile version