ಕಾರವಾರ ಕದಂಬ ನೌಕಾನೆಲೆಯ ಸಿಬ್ಬಂದಿ ನಾಪತ್ತೆ – ಪ್ರಕರಣದ ಸುತ್ತ ಹಲವು ಅನುಮಾನ

1 Min Read

ಕಾರವಾರ: ಕದಂಬ ನೌಕಾನೆಲೆಯಲ್ಲಿ (Kadamba Naval Base) ಸೇಲರ್ (Sailor) ಆಗಿ ಕರ್ತವ್ಯ ನಿರ್ವಹಿಸುತಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಆಂದ್ರಪ್ರದೇಶದ ಅನಂತಪುರದ ಕುಂಟಿಮಡ್ಡಿ ಗ್ರಾಮದ ದಿನೇಶ್ ಕುಮಾರ್ (28) ಕಾಣೆಯಾದ‌ ಸಿಬ್ಬಂದಿ. ಅ.27 ರಂದು ಕದಂಬ ನೌಕಾನೆಲೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ವೇಳೆ ಮಧ್ಯಾಹ್ನ 2 ಗಂಟೆ ವೇಳೆಗೆ ಅವರು ನಾಪತ್ತೆಯಾಗಿದ್ದರು. ಈ ಕುರಿತು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪಾಕ್‌ ಸೇರಿ ಇತರ ವಿದೇಶಿ ಏಜೆಂಟರಿಗೆ ನೌಕಾದಳದ ರಹಸ್ಯ ಫೋಟೋ ಹಂಚಿಕೆ – NIAಯಿಂದ ಮೂವರು ವಶಕ್ಕೆ

ಈ ಹಿಂದಿನಿಂದಲೂ ಪಾಕಿಸ್ತಾನದ ಬೇಹುಗಾರಿಕಾ ತಂಡ ಹನಿಟ್ರ್ಯಾಪ್ ಮಾಡಿ ನೌಕಾ ಸಿಬ್ಬಂದಿ ಹಾಗೂ ಅಧಿಕಾರಿಗಳಿಂದ ಕದಂಬ ನೌಕಾನೆಲೆಯ ಮಾಹಿತಿಯನ್ನು ‌ಪಡೆಯುತ್ತಿದ್ದರು. ಈ ಸಂಬಂಧ ಕಳೆದ ಎರಡು ವರ್ಷದಲ್ಲಿ ಇದೇ ನೌಕಾನೆಲೆಯ ನಾಲ್ಕು ಸಿಬ್ಬಂದಿಯನ್ನು ನೌಕಾದಳದ ಗುಪ್ತಚರ ಇಲಾಖೆ ಬಂಧಿಸಿತ್ತು. ಇದೀಗ ನೌಕೆಯಲ್ಲಿ ಕಾರ್ಯನಿರ್ವಹಿಸುವ ಈ ಸೇಲರ್ ಕದಂಬ ನೌಕಾ ನೆಲೆಯಿಂದ ಕಾಣೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ನಾಪತ್ತೆಯಾದ ಸಿಬ್ಬಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ ನೌಕಾದಳದಿಂದ ಮಿಸೈಲ್ ದಾಳಿಗೆ ಟಾರ್ಗೆಟ್ ಫಿಕ್ಸ್ ಆಗಿತ್ತು – ಆದ್ರೆ ಅಂತಿಮ ಆದೇಶ ಬರಲಿಲ್ಲ

Share This Article
Exit mobile version