Wednesday, 11th December 2019

ಗಣಿನಾಡು ಬಳ್ಳಾರಿಯಲ್ಲಿ `ಟಗರು’ ನರ್ತನ – ಆಡಿಯೋ ಲಾಂಚ್ ಮಾಡಿ ಕುಣಿದ ದೊಡ್ಮನೆ ಬ್ರದರ್ಸ್

ಬಳ್ಳಾರಿ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ `ಟಗರು’ ಚಿತ್ರದ ಆಡಿಯೋ ಶನಿವಾರ ಸಂಜೆ ಬಿಡುಗಡೆಯಾಗಿದೆ.

ಹೊಸಪೇಟೆಯಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಲಕ್ಷಾಂತರ ಪ್ರೇಕ್ಷಕರ ಸಮ್ಮುಖದಲ್ಲಿ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಲಾಯಿತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಶಿವರಾಜ್ ಕುಮಾರ್, ಶಾಸಕ ಆನಂದ ಸಿಂಗ್ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿದರು.

ಆಡಿಯೋ ಬಿಡುಗಡೆ ವೇಳೆ ಟಗರು ಚಿತ್ರದ ಟೈಟಲ್ ಸಾಂಗ್ ಗೆ ನಟ ಶಿವರಾಜ್ ಕುಮಾರ್ ಹಾಗೂ ಅಂಜನಿಪುತ್ರ ಚಿತ್ರದ ಹಾಡಿಗೆ ಪವರ ಸ್ಟಾರ್ ಪುನೀತ್ ರಾಜಕುಮಾರ್ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ನಟಿ ಮಾನ್ವಿತಾ ಕೂಡಾ ಚಿತ್ರದ ಹಾಡಿಗೆ ಸ್ಟೆಪ್ ಹಾಕಿದ್ರು. ಇನ್ನು ನಟ- ನಟಿಯರು ಡಾನ್ಸ್ ಮಾಡುತ್ತಿದಂತೆ ಪ್ರೇಕ್ಷಕರು ಹುಚ್ಚೆದು ಕುಣಿದ್ರು. ಸಮಾರಂಭದಲ್ಲಿ ಸಾವಿರಾರು ಜನರು ಭಾಗವಹಿಸಿದ ಪರಿಣಾಮ ಪೊಲೀಸರು ಜನರನ್ನು ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಬೇಕಾಯಿತು.

ಸುಮಾರು ಮೂರು ತಾಸುಗಳ ಕಾಲ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ನಟ ಶಿವಣ್ಣ ಹಾಗೂ ಪುನೀತ್ ರಾಜಕುಮಾರ್ ಹೊಸಪೇಟೆಗೂ ರಾಜ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿ ಯಾವುದೇ ಸಮಾರಂಭ ಮಾಡಿದ್ರೂ ಸಕ್ಸಸ್ ಆಗುತ್ತೆ ಎಂದು ಹರ್ಷ ವ್ಯಕ್ತಪಡಿಸಿದರು.

ಒಟ್ಟಾರೆ ಟಗರು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಮಾತ್ರ ಪುಲ್ ಪೊಗರಿನಿಂದಲೇ ನಡೆದಿರುವುದು ಚಿತ್ರ ಯಶ್ವಸಿಯಾಗಲಿದೆ ಅನ್ನೋದಕ್ಕೆ ಮುನ್ಸೂಚನೆ ನೀಡಿದಂತೆ ಕಂಡುಬಂದಿತು. ಇನ್ನೂ ಆಡಿಯೋ ಬಿಡುಗಡೆ ವೇಳೆ ನಟ ಯಶ್ ಕೂಡಾ ಚಿತ್ರಕ್ಕೆ ಹಾರೈಸಿದ್ದಾರೆ.

ಸಮಾರಂಭದಲ್ಲಿ ನಟ ಶಿವರಾಜ್ ಕುಮಾರ್, ನಟಿ ಮಾನ್ವಿತಾ, ನಟ ಮುರಳಿ, ಖಳನಟ ವಷಿಷ್ಠ ಸೇರಿದಂತೆ ಚಿತ್ರರಂಗದ ತಾರೆಯರು ಭಾಗಿಯಾಗಿದ್ದರು. ಸಮಾರಂಭದ ಅಂಗವಾಗಿ ಪ್ರೇಕ್ಷಕರಿಗೆ 20 ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

Leave a Reply

Your email address will not be published. Required fields are marked *