Saturday, 25th January 2020

ವೈದ್ಯರ ಎಡವಟ್ಟಿನಿಂದಾಗಿ ಕೊಪ್ಪಳದಲ್ಲಿ 8 ರ ಬಾಲಕಿ ಕೈ ಕಳೆದುಕೊಂಡ್ಳು!

ಕೊಪ್ಪಳ: ವೈದ್ಯೋ ನಾರಾಯಣೋ ಹರಿ ಅಂತಾರೆ. ಈ ಕಾರಣಕ್ಕಾಗಿಯೇ ರೋಗಿಗಳು ತಮ್ಮಲ್ಲಿನ ಎಲ್ಲ ನೋವನ್ನು ಡಾಕ್ಟರ್ ಮುಂದೆ ಹೇಳಿಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬ ವೈದ್ಯ ಮೊಣಕೈ ಮುರಿದುಕೊಂಡಿದ್ದ ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡೋದಾಗಿ ಕೈ ಕತ್ತರಿಸಿ, ಅರ್ಧಕ್ಕೆ ಬಿಟ್ಟಿದ್ದಾರೆ. ಇದ್ರಿಂದ ಬಾಲಕಿ ಪಾಲಕರು ದಿಕ್ಕುತೋಚದಂತಾಗಿದ್ದು, ಕಣ್ಣೀರಿಡ್ತಿದ್ದಾರೆ.

ಹೌದು. ಗಂಗಾವತಿ ತಾಲೂಕಿನ ಬಸವರಾಜ ಹಾಗೂ ಅಂಬಮ್ಮ ದಂಪತಿಯ 8 ವರ್ಷದ ಪುತ್ರಿ ಅಂಕಿತಾ ಕಳೆದ 21ರಂದು ಮನೆಯಲ್ಲಿ ಬಿದ್ದು ಮೊಣಕೈ ಮುರಿದುಕೊಂಡಿದ್ದಳು. ಬಳಿಕ ಪೋಷಕರು ಅಂಕಿತಾಳನ್ನ ಕೊಪ್ಪಳದ ಜಿಲ್ಲಾಸ್ಪತ್ರೆಗೆ ಸೇರಿಸಿದ್ರು. ವೈದ್ಯರು ಮಾತ್ರ ಎಕ್ಸ್‍ರೇ ಮಾಡಿದ 4 ದಿನಗಳ ಬಳಿಕ ಅಂದ್ರೆ ಗುರುವಾರ ಆಪರೇಷನ್ ಶುರುಮಾಡಿದ್ದಾರೆ. ಆದರೆ ಆಪರೇಷನ್ ಶುರು ಮಾಡಿದಾಗ ಇದು ನನ್ನ ಕೈಲಿ ಆಗಲ್ಲ ಅಂತಾ ಡಾಕ್ಟರ್ ವಿಜಯ ಸಂಕದ ಅವರಿಗೆ ಗೊತ್ತಾಗಿದೆ, ತಕ್ಷಣ ಬ್ಯಾಂಡೇಜ್ ಸುತ್ತಿ, ಬೇರೆ ಆಸ್ಪತ್ರೆಗೆ ಹೋಗಿ ಎಂದು ಕೈತೊಳೆದುಕೊಂಡಿದ್ದಾರೆ. ಇದರಿಂದ ಪೋಷಕರು ಆತಂಕ್ಕೆ ಈಡಾಗಿದ್ದಾರೆ.

ಆದರೆ ಎಕ್ಸರೇಯಲ್ಲಿ ಎಲ್ಲ ಸಮಸ್ಯೆ ಗೊತ್ತಾಗಲ್ಲ. ಆಪರೇಷನ್ ಶುರುಮಾಡಿದಾಗ ಗೊತ್ತಾಯ್ತು. ಅದಕ್ಕೆ ಬೇರೆ ಕಡೆಗೆ ರೆಫರ್ ಮಾಡಿದ್ದೇನೆ ಅಂತ ಇದೀಗ ವೈದ್ಯ ಡಾ. ವಿಜಯ ಸುಂಕದ ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ನಾಲ್ಕೈದು ದಿನ ಆದ್ಮೇಲೆ ಡಾಕ್ಟರ್ ಹೀಗೆ ಮಾಡಿರುವುದರಿಂದ ಇದೀಗ ಬಡ ಕುಟುಂಬಕ್ಕೆ ದಿಕ್ಕುತೋಚದಂತಾಗಿದೆ.

Leave a Reply

Your email address will not be published. Required fields are marked *