ಕರುಳಿನ ಸಮೇತ ಹೆಣ್ಣು ಶಿಶುವನ್ನ ಎಸೆದು ಹೋದ್ರು

By
0 Min Read

ಕೊಪ್ಪಳ: ದುರುಗಮ್ಮನ ಹಳ್ಳದಲ್ಲಿ ಹೆಣ್ಣು ಶಿಶುವೊಂದು ಪತ್ತೆಯಾಗಿದೆ. ಹೆಣ್ಣುಮಗು ಎಂಬ ಕಾರಣಕ್ಕೆ ಹೆತ್ತವರು ಕರುಳಿನ ಸಮೇತ ಶಿಶುವನ್ನು ಎಸೆದು ಹೋಗಿರೋ ಶಂಕೆ ವ್ಯಕ್ತವಾಗಿದೆ.

ಕೊಪ್ಪಳದ ಗಂಗಾವತಿ ಮೈಹಿಬೂಬ ನಗರದ ಸಮೀಪದ ದುರ್ಗಮ್ಮ ಹಳ್ಳದಲ್ಲಿ ಈ ಹಸುಗೂಸು ಪತ್ತೆಯಾಗಿದ್ದು, ಬೀದಿ ನಾಯಿಗಳು ಹಸುಗೂಸನ್ನು ಎಳೆದಾಡುವಾಗ ಸ್ಥಳೀಯರು ಗಮನಿಸಿದ್ದಾರೆ. ನಾಯಿ ಪಾಲಾಗುತ್ತಿದ್ದ ಹಸುಗೂಸನ್ನು ಸ್ಥಳೀಯರು ರಕ್ಷಣೆ ಮಾಡುವಷ್ಟರಲ್ಲಿ ಹಸುಗೂಸಿಗೆ ಜೀವವಿರಲಿಲ್ಲ.

ಹೆಣ್ಣು ಎಂಬ ಕಾರಣಕ್ಕೆ ಶಿಶು ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರೇ ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಗಂಗಾವತಿ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article
Exit mobile version