Advertisements

ಹೆರಿಗೆಯಾದ್ಮೇಲೆ ತಾಯಿ ಸಾವನ್ನಪ್ಪಿದ್ದಾರೆಂದ ವೈದ್ಯರು- ಅಂತ್ಯಕ್ರಿಯೆ ವೇಳೆ ಕಣ್ಣು ಬಿಟ್ಟು ಮತ್ತೆ ಸಾವನ್ನಪ್ಪಿದ ಮಹಿಳೆ

ಹಾವೇರಿ: ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ನಡೆದಿದೆ.

Advertisements

ಮೃತ ಮಹಿಳೆಯನ್ನು ನಾಗಮ್ಮ ಯಮನಪ್ಪ ಕೋಡೇರ (25) ಎಂದು ಗುರುತಿಸಲಾಗಿದೆ. ಬುಧವಾರ ತಡರಾತ್ರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಗಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ನಂತರ ಲೋ ಬಿಪಿ ಆಗಿದ್ದರಿಂದ ಮಹಿಳೆಯನ್ನ ರಾಣೇಬೆನ್ನೂರು ಹೆರಿಗೆ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ಹೆರಿಗೆ ಆಸ್ಪತ್ರೆ ಸಿಬ್ಬಂದಿ ನಾಗಮ್ಮರನ್ನು ಸರಿಯಾಗಿ ಪರೀಕ್ಷಿಸದೆ ಸಾವನ್ನಪ್ಪಿದ್ದಾರೆಂದು ಹೇಳಿ ಬಾಣಂತಿಯನ್ನ ಸಾಗಹಾಕಿದ್ದರು.

Advertisements

ಬಾಣಂತಿ ಸತ್ತಿದ್ದಾರೆಂದು ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದ ವೇಳೆ ನಾಗಮ್ಮ ಕಣ್ಣು ತೆರೆದಿದ್ದರು. ನಂತರ ಮತ್ತೆ ನಾಗಮ್ಮರನ್ನ ಗ್ರಾಮದಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ.

ಹೆರಿಗೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗಳು ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisements

Advertisements
Exit mobile version