ದಾಖಲೆ ಕೇಳಿದ ಟ್ರಾಫಿಕ್‌ ಪೊಲೀಸಪ್ಪನನ್ನೇ ಕೆಲ ಮೀಟರ್‌ ಎಳೆದೊಯ್ದ ಚಾಲಕ!

Public TV
1 Min Read
HARYANA TRAFFIC

ನವದೆಹಲಿ: ಡಾಕ್ಯುಮೆಂಟ್‌ (Vehicle Document) ದಾಖಲೆಗಳನ್ನು ಕೇಳಿದ ನಂತರ ವೇಗವಾಗಿ ಬಂದ ವಾಹನವೊಂದು ಟ್ರಾಫಿಕ್ ಪೊಲೀಸರನ್ನು (Traffic Police) ಎಳೆದೊಯ್ದ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ತಿಳಿಸಿದೆ.

ಬಲ್ಲಭಗಢ ಬಸ್ ನಿಲ್ದಾಣ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ಏನಿದೆ..?: ಟ್ರಾಫಿಕ್‌ ಪೊಲೀಸರು ವಾಹನವನ್ನು ನಿಲ್ಲಿಸಿ ದಾಖಲೆಗಳನ್ನು ನೀಡುವಂತೆ ಕೇಳುತ್ತಾರೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ಚಾಲಕ ಸಡನ್‌ ಆಗಿ ಆಕಿಲರೇಟರ್‌ ತುಳಿದಿದ್ದಾನೆ. ಪರಿಣಾಮ ಟ್ರಾಫಿಕ್‌ ಪೊಲೀಸ್‌ ಸಹಿತ ವಾಹನ ವೇಗವಾಗಿ ಮುಂದೆ ಚಲಿಸಿದ್ದು, ಅಧಿಕಾರಿಯನ್ನು ಕೆಲ ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಿದೆ.

ಇದೇ ವೇಳೆ ಸ್ಥಳೀಯರು ಹಾಗೂ ಇತರ ಟ್ರಾಫಿಕ್‌ ಪೊಲೀಸರ ಸಹಾಯದಿಂದ ವಾಹವನನ್ನು ನಿಲ್ಲಿಸಿ, ಸಿಲುಕಿಕೊಂಡ ಪೊಲೀಸ್‌ ಅಧಿಕಾರಿಯನ್ನು ರಕ್ಷಿಸಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಘಟನೆ ಸಂಬಂಧ ಪೊಲೀಸರು ಚಾಲಕನನ್ನು ಗುರುತಿಸಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Share This Article