Bengaluru City
902 ಹೊಸ ಪ್ರಕರಣ – 3,669 ಜನಕ್ಕೆ ಲಸಿಕೆ

– ರಾಜ್ಯದಲ್ಲಿ 7,342 ಸಕ್ರಿಯ ಪ್ರಕರಣಗಳು
ಬೆಂಗಳೂರು: ಇಂದು 902 ಜನಕ್ಕೆ ಮಹಾಮಾರಿ ಕೊರೊನಾ ಸೋಂಕು ತಗುಲಿದ್ರೆ, 3,669 ಜನ ಲಸಿಕೆಯನ್ನ ಪಡೆದುಕೊಂಡಿದ್ದಾರೆ. ಇಂದು ರಾಜಧಾನಿಯಲ್ಲಿ ಮಾತ್ರ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ರಾಜ್ಯದ ಯಾವುದೇ ಜಿಲ್ಲಾ ಕೇಂದ್ರದಲ್ಲಿ ಲಸಿಕೆ ವಿತರಣಾ ಕಾರ್ಯಕ್ರಮ ನಡೆದಿಲ್ಲ.
ರಾಜ್ಯದಲ್ಲಿ 9,342 ಸಕ್ರಿಯ ಪ್ರಕರಣಗಳ ಪೈಕಿ 157 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಕೊರೊನಾಗೆ ಮೂವರು ಮೃತರಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 12,193ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೋವಿಡ್-19 ಖಚಿತ ಪ್ರಕರಣಗಳ ಸಂಖ್ಯೆ 9,35,478ಕ್ಕೆ ತಲುಪಿದೆ.
ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.1.47 ಮತತ್ತು ಮರಣ ಪ್ರಮಾಣ ಶೇ.0.33ರಷ್ಟಿದೆ. ಇಂದು 542 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 2, ಬಳ್ಳಾರಿ 11, ಬೆಳಗಾವಿ 23, ಬೆಂಗಳೂರು ಗ್ರಾಮಾಂತರ 11, ಬೆಂಗಳೂರು ನಗರ 527, ಬೀದರ್ 8, ಚಾಮರಾಜನಗರ 4, ಚಿಕ್ಕಬಳ್ಳಾಪುರ 19, ಚಿಕ್ಕಮಗಳೂರು 2, ಚಿತ್ರದುರ್ಗ 23, ದಕ್ಷಿಣ ಕನ್ನಡ 31, ದಾವಣಗೆರೆ 13, ಧಾರವಾಡ 15, ಗದಗ 1, ಹಾಸನ 19, ಹಾವೇರಿ 2, ಕಲಬುರಗಿ 39, ಕೊಡಗು 9, ಕೋಲಾರ 4, ಕೊಪ್ಪಳ 1, ಮಂಡ್ಯ 9, ಮೈಸೂರು 51, ರಾಯಚೂರು 1, ರಾಮನಗರ 0, ಶಿವಮೊಗ್ಗ 19, ತುಮಕೂರು 24, ಉಡುಪಿ 10, ಉತ್ತರ ಕನ್ನಡ 15, ವಿಜಯಪುರ 7 ಮತ್ತು ಯಾದಗಿರಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
