Tuesday, 17th September 2019

Recent News

ಮಳೆ ಗಾಳಿಗೆ ಗೋಡೆ ಕುಸಿದು 9ರ ಬಾಲಕಿ ಸಾವು

ದಾವಣಗೆರೆ/ಬಳ್ಳಾರಿ: ತಡರಾತ್ರಿ ಮಳೆರಾಯನ ಆರ್ಭಟಕ್ಕೆ ಮನೆಯೊಂದರ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಬಾಲಕಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗುಂಡಿನಕೇರಿಯಲ್ಲಿ ನಡೆದಿದೆ.

ಗುಂಡಿನಕೇರಿ ನಿವಾಸಿ ಸಹರಾ(9) ಸಾವನ್ನಪ್ಪಿರುವ ಬಾಲಕಿ. ತಡರಾತ್ರಿ ಸುರಿದ ಗಾಳಿ ಸಹಿತ ಭಾರೀ ಮಳೆಗೆ ಈ ದುರ್ಘಟನೆ ಸಂಭವಿಸಿದೆ. ಬಾಲಕಿಯ ತಾಯಿ ರೇಷ್ಮಬಾನು, ಪುತ್ರ ಹಷದ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಲಕಿಯ ಮೃತ ದೇಹವನ್ನು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ಸದ್ಯ ಈ ಕುರಿತು ಹರಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ತಾಲೂಕಿನಾದ್ಯಂತ ಸುರಿದ ಮಳೆಗೆ ಹಲವು ಕಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದೆ. ಅಲ್ಲದೆ ಅರಸನಾಳು ಗ್ರಾಮದಲ್ಲಿ ಕಠಾವಿಗೆ ಬಂದಿದ್ದ ನಾಲ್ಕು ಎಕರೆ ಬಾಳೆ ನೆಲಸಮವಾಗಿದೆ. ಇದರಿಂದ ಕಷ್ಟಪಟ್ಟು ಬೆಳೆದ ಬೆಳೆ ನಾಶವಾಯ್ತಲ್ಲ ಎಂದು ರೈತರು ಕಂಗಾಲಾಗಿದ್ದಾರೆ.

Leave a Reply

Your email address will not be published. Required fields are marked *