Connect with us

Bengaluru City

ರಾಜ್ಯದಲ್ಲಿ ಇಂದು 8,626 ಮಂದಿಗೆ ಕೊರೊನಾ- 5 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

Published

on

– 10,949 ಮಂದಿ ಡಿಸ್ಚಾರ್ಜ್
– 179 ಮಂದಿ ಬಲಿ

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಪ್ರಕರಣಗಳು ದಿನದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಸೋಂಕಿತರ ಸಂಖ್ಯೆ 5 ಲಕ್ಷದ ಗಡಿ ದಾಟಿದೆ. ಇಂದು 8,626 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 5,02,982ಕ್ಕೆ ಏರಿಕೆಯಾಗಿದೆ.

ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, 179 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ 7,808 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಇಂದು ರಾಜ್ಯದಲ್ಲಿ 10,949 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 5,02,982 ಸೋಂಕಿತರ ಪೈಕಿ 1,01,129 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 3,94,026 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 814 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು 21,368 ಮಂದಿಯ ರ‍್ಯಾಪಿಡ್‌ ಟೆಸ್ಟ್‌ ನಲ್ಲಿ 36,102 ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು, ಒಟ್ಟು 57,470 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಒಟ್ಟು 14,26,132 ಮಂದಿಗೆ ರ‍್ಯಾಪಿಡ್‌ ಟೆಸ್ಟ್‌, 26,89,651 ಮಂದಿಗೆ ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು ಕರ್ನಾಟಕದಲ್ಲಿ 41,15,783 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಇಂದು 3,623 ಮಂದಿಗೆ ಸೋಂಕು ದೃಢವಾಗಿದ್ದು, 37 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,87,705ಕ್ಕೆ ಏರಿಕೆ ಆಗಿದೆ. ಬಾಗಲಕೋಟೆ 206, ಬಳ್ಳಾರಿ 296, ಬೆಳಗಾವಿ 221, ದಕ್ಷಿಣ ಕನ್ನಡ 456, ಮೈಸೂರು 600, ಶಿವಮೊಗ್ಗ 257, ತುಮಕೂರು 208, ಉಡುಪಿ 493 ಮಂದಿಯಲ್ಲಿ ಇಂದು ಸೋಂಕು ಪತ್ತೆಯಾಗಿದೆ.

ಬಾಗಲಕೋಟೆ 112, ಬಳ್ಳಾರಿ 362, ಬೆಳಗಾವಿ 395, ಬೆಂಗಳೂರು ಗ್ರಾಮಾಂತರ 131, ಬೆಂಗಳೂರು ನಗರ 2,725, ಬೀದರ್ 53, ಚಾಮರಾಜನಗರ 0, ಚಿಕ್ಕಬಳ್ಳಾಪುರ 107, ಚಿಕ್ಕಮಗಳೂರು 643, ಚಿತ್ರದುರ್ಗ 184, ದಕ್ಷಿಣ ಕನ್ನಡ 340, ದಾವಣಗೆರೆ 466, ಧಾರವಾಡ 134, ಗದಗ 182, ಹಾಸನ 317, ಹಾವೇರಿ 465, ಕಲಬುರಗಿ 202, ಕೊಡಗು 141, ಕೋಲಾರ 93, ಕೊಪ್ಪಳ 277, ಮಂಡ್ಯ 381, ಮೈಸೂರು 883, ರಾಯಚೂರು 186, ರಾಮನಗರ 127, ಶಿವಮೊಗ್ಗ 1,142, ತುಮಕೂರು 376, ಉಡುಪಿ 268, ಉತ್ತರ ಕನ್ನಡ 105, ವಿಜಯಪುರ 77, ಯಾದಗಿರಿ 75 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Click to comment

Leave a Reply

Your email address will not be published. Required fields are marked *