Connect with us

Bengaluru City

ಇಂದು 8,324 ಕೊರೊನಾ ಪ್ರಕರಣ ಪತ್ತೆ- ರಾಜ್ಯದಲ್ಲಿ 115 ಜನ ಸಾವು

Published

on

– ಒಟ್ಟು ಸೋಂಕಿತರ ಸಂಖ್ಯೆ 3,27,076ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಓಟ ಮುಂದುವರಿದಿದ್ದು, ಇಂದು 8,324 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,27,076ಕ್ಕೆ ಏರಿಕೆಯಾಗಿದೆ.

ಕೊರೊನಾ ಮಹಾಮಾರಿಗೆ ಇಂದು 115 ಜನ ಬಲಿಯಾಗಿದ್ದು, ಈ ವರೆಗೆ ಒಟ್ಟು 5,483 ಜನ ಸೋಂಕಿಗೆ ಬಲಿಯಾಗಿದ್ದಾರೆ. 721 ಜನ ಇನ್ನೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇಂದು 8,324 ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 86,446ಕ್ಕೆ ಏರಿಕೆಯಾಗಿದೆ. ಇಂದು 8,110 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ವರೆಗೆ ಒಟ್ಟು 2,35,128 ಜನ ಡಿಸ್ಚಾರ್ಜ್ ಆಗಿದ್ದಾರೆ.

 

ಬೆಂಗಳೂರಿನಲ್ಲಿ ಇಂದು 2,993 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,24,442ಕ್ಕೆ ಏರಿಕೆಯಾಗಿದೆ. ಸಿಲಿಕಾನ್ ಸಿಟಿಯಲ್ಲಿ ಇಂದು 2,174 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವರೆಗೆ ಒಟ್ಟು 85,215 ಜನ ಕೊರೊನಾದಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ ಒಟ್ಟು 37,315 ಸಕ್ರಿಯ ಪ್ರಕರಣಗಳಿವೆ. ಇಂದು ಬೆಂಗಳೂರಿನಲ್ಲಿ 25 ಜನ ಕೊರೊನಾಗೆ ಬಲಿಯಾಗಿದ್ದಾರೆ. ಒಟ್ಟು 133 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 152, ಬಳ್ಳಾರಿ 468, ಬೆಳಗಾವಿ 276, ಬೆಂಗಳೂರು ಗ್ರಾಮೀಣ 182, ಬೆಂಗಳೂರು ನಗರ 2993, ಬೀದರ್ 46, ಚಾಮರಾಜನಗರ 45, ಚಿಕ್ಕಬಳ್ಳಾಪುರ 102, ಚಿತ್ರದುರ್ಗ 100, ದಕ್ಷಿಣ ಕನ್ನಡ 272, ದಾವಣಗೆರೆ 319, ಧಾರವಾಡ 290, ಗದಗ 181, ಹಾಸನ 325, ಹಾವೇರಿ 93, ಕಲಬುರಗಿ 173, ಕೊಡಗು 46, ಕೋಲಾರ 51, ಕೊಪ್ಪಳ 238, ಮಂಡ್ಯ 194, ಮೈಸೂರು 309, ರಾಯಚೂರು 186, ರಾಮನಗರ 153, ಶಿವಮೊಗ್ಗ 333, ತುಮಕೂರು 138, ಉಡುಪಿ 172, ಉತ್ತರ ಕನ್ನಡ 130 ಮತ್ತು ಯಾದಗಿರಿಯಲ್ಲಿ 98 ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *