Connect with us

Bengaluru City

ರಾಜ್ಯದಲ್ಲಿಂದು 830 ಹೊಸ ಕೊರೊನಾ ಪ್ರಕರಣ – 10 ಸಾವು, 2,164 ಡಿಸ್ಚಾರ್ಜ್

Published

on

– ಬೆಂಗಳೂರಿನಲ್ಲಿ 369 ಹೊಸ ಕೊರೊನಾ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿಂದು 830 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 2,164 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕೊರೊನಾ ಸೋಂಕಿತರ ಸಂಖ್ಯೆ 9,02,240ಕ್ಕೆ ಏರಿಕೆಯಾಗಿದ್ದು, ಇದುವರೆಗೂ ಮಹಾಮಾರಿಯಿಂದಾಗಿ 11,954 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ 16,065 ಸಕ್ರಿಯ ಪ್ರಕರಣಗಳಿದ್ದು, 254 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಕೊರೊನಾಗೆ 10 ಜನ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.1.27 ಮತ್ತು ಮರಣ ಪ್ರಮಾಣ ಶೇ.1.20ರಷ್ಟಿದೆ. ಇಂದು 64,855 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಸಿಲಿಕಾನ್ ಸಿಟಿಯಲ್ಲಿ 369 ಹೊಸ ಪ್ರಕರಣಗಳು ವರದಿಯಾಗಿದ್ದು, 10,852 ಸಕ್ರಿಯ ಪ್ರಕರಣಗಳಿವೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 4, ಬಳ್ಳಾರಿ 17, ಬೆಳಗಾವಿ 11, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು ನಗರ 369, ಬೀದರ್ 4, ಚಾಮರಾಜನಗರ 7, ಚಿಕ್ಕಬಳ್ಳಾಪುರ 31, ಚಿಕ್ಕಮಗಳೂರು 15, ಚಿತ್ರದುರ್ಗ 5, ದಕ್ಷಿಣ ಕನ್ನಡ 22, ದಾವಣಗೆರೆ 18, ಧಾರವಾಡ 14, ಗದಗ 2, ಹಾಸನ 29, ಹಾವೇರಿ 3, ಕಲಬುರಗಿ 12, ಕೊಡಗು 35, ಕೋಲಾರ 25, ಕೊಪ್ಪಳ 5, ಮಂಡ್ಯ 21, ಮೈಸೂರು 56, ರಾಯಚೂರು 6, ರಾಮನಗರ 2, ಶಿವಮೊಗ್ಗ 13, ತುಮಕೂರು 36, ಉಡುಪಿ 12, ಉತ್ತರ ಕನ್ನಡ 15, ವಿಜಯಪುರ 15 ಮತ್ತು ಯಾದಗಿರಿಯಲ್ಲಿ 17 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *

www.publictv.in