Crime
8ರ ಮಗನ ಕೈ ಕಾಲುಗಳನ್ನು ಬಿಸಿ ಸೌಟಿನಿಂದ ಸುಟ್ಟ ತಂದೆ

ತಿರುವನಂತಪುರಂ: 8 ವರ್ಷದ ಬಾಲಕ ಕಲಿಕೆಯಲ್ಲಿ ಹಿಂದೆ ಇದ್ದಾನೆ ಎಂಬ ಒಂದೇ ಕಾರಣಕ್ಕೆ ಆತನ ತಂದೆ ಬಿಸಿ ಸೌಟಿನಿಂದ ಕೈ ಕಾಲುಗಳನ್ನು ಸುಟ್ಟ ಘಟನೆ ಕೇರಳದಲ್ಲಿ ಬೆಳಕಿಗೆ ಬಂದಿದೆ.
ಬಾಲಕನ ತಂದೆ ಶ್ರೀಕುಮ್ಕರ್ (31) ಆರೋಪಿಯಾಗಿದ್ದು. ಮದ್ಯಪಾನ ಮಾಡಿ ತನ್ನ 8 ವರ್ಷದ ಮಗನ ಮೇಲೆ ಬಿಸಿ ಸೌಟಿನಿಂದ ಕಾಲು ಮತ್ತು ಕೈಗಳನ್ನು ಸುಟ್ಟು ವಿಕೃತಿ ಮೆರೆದಿದ್ದಾನೆ.
ಘಟನೆ ನಡೆದು ಕೆಲದಿನಗಳ ನಂತರ ಮಾಹಿತಿ ಪಡೆದ ಪಂಚಾಯತ್ ಸದಸ್ಯರು ಪೊಲೀಸರಿಗೆ ದೂರು ನೀಡಿ ಶ್ರೀಕುಮ್ಕರ್ ನನ್ನು ಆರೆಸ್ಟ್ ಮಾಡಿಸಿದ್ದಾರೆ. ಬಾಲಕನ ಕೈ ಮತ್ತು ಕಾಲುಗಳಲ್ಲಿ ಸುಟ್ಟ ಗಾಯಗಳಿದ್ದು ಆತನನ್ನು ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
