Connect with us

International

17ರ ಹುಡುಗಿಯನ್ನು ವಿವಾಹವಾದ 78ರ ಅಜ್ಜ- 22 ದಿನಗಳಲ್ಲೇ ವಿಚ್ಛೇದನ

Published

on

– ವೃದ್ಧನಿಂದಲೇ ವಿಚ್ಛೇದನಕ್ಕೆ ಅರ್ಜಿ
– ವೃದ್ಧನ ಕ್ರಮದಿಂದ ಯುವತಿ, ಕುಟುಂಬಸ್ಥರು ಶಾಕ್

ಜಕಾರ್ತಾ: 78 ವರ್ಷದ ಅಜ್ಜ 17ರ ಹುಡುಗಿಯನ್ನು ವಿವಾಹವಾಗುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಆದರೆ ವಿವಾಹವಾದ ಕೇವಲ 22 ದಿನಗಳಲ್ಲಿ ವಿಚ್ಛೇದನ ಪಡೆದಿದ್ದಾರೆ. ಅದೂ ಸಹ 78 ವರ್ಷದ ಅಜ್ಜನೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ವಿಶೇಷ.

ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು, ದಂಪತಿಯನ್ನು 78 ವರ್ಷದ ಅಬಾ ಸರ್ನಾ ಹಾಗೂ ಪತ್ನಿ ನೋನಿ ನವಿತಾ ಎಂದು ಗುರುತಿಸಲಾಗಿದೆ. ಕಳೆದ ತಿಂಗಳು ಈ ಜೋಡಿ ವಿವಾಹವಾಗಿದ್ದು, ಕಳೆದ ವಾರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವೃದ್ಧ ಹಾಗೂ ಹುಡುಗಿಯ ಮಧ್ಯೆ ವಯಸ್ಸಿನ ವ್ಯತ್ಯಾಸ ಹೆಚ್ಚಿದ್ದರಿಂದ ಈ ವಿವಾಹ ತುಂಬಾ ಗಮನಸೆಳೆದಿತ್ತು.

ವೃದ್ಧ ಅಬಾ ಸರ್ನಾ ಅವರು ವಿಚ್ಛೇದನ ಪತ್ರ ಕಳುಹಿಸಿದ್ದಕ್ಕೆ 17 ವರ್ಷದ ನೋನಿ ಹಾಗೂ ಕುಟುಂಬದವರಿಗೆ ಆಘಾತವಾಗಿದೆ. ಇವರಿಬ್ಬರ ಸಂಬಂಧದ ಬಗ್ಗೆ ಹುಡುಗಿಗಾಗಲಿ ಅಥವಾ ಕುಟುಂಬದವರಿಗಾಗಲಿ ಯಾವುದೇ ಸಮಸ್ಯೆ ಇರಲಿಲ್ಲ. ಯಾವುದೇ ಮುನ್ಸೂಚನೆ ನೀಡದೆ ಈ ರೀತಿ ಮಾಡಿದ್ದಕ್ಕೆ ತುಂಬಾ ಆಘಾತವಾಗಿದೆ ಎಂದು ನೋನಿ ಸಹೋದರಿ ಅಯಾನ್ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಅಬಾ ಸರ್ನಾ ವಿಚಾರದಲ್ಲಿ ನಮ್ಮ ಕುಟುಂಬದವರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಅಬಾ ಸರ್ನಾ ಹಾಗೂ ಕುಟುಂಬದವರಿಂದ ಸಮಸ್ಯೆ ಶುರುವಾಗಿದೆ. ಅವರು ವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ವಿವಾಹವಾಗುವುದಕ್ಕೂ ಮುನ್ನವೇ ನೋನಿ ಗರ್ಭಿಣಿಯಾಗಿದ್ದರಿಂದ ದಂಪತಿ ಬೇರೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಅಯಾನ್ ಇದನ್ನು ನಿರಾಕರಿಸಿದ್ದಾರೆ.

ವೃದ್ಧ ಅಬಾ ಅವರು ಆರ್‍ಎಂ 2,819(50 ಸಾವಿರ ರೂ.), ಮೋಟರ್ ಸೈಕಲ್, ಹಾಸಿಗೆ ಮೊದಲಾದವುಗಳನ್ನು ನೋನಿಗೆ ನೀಡಿದ್ದರು. ಈ ವಧುದಕ್ಷಿಣೆಯನ್ನು ಸಹ ವಾಪಸ್ ಕೊಂಡೊಯ್ದಿದ್ದು, ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಇಂಡೋನೇಷ್ಯಾದಲ್ಲಿ ವಧುದಕ್ಷಿಣೆ ಕೊಡುವುದು ಸಾಮಾನ್ಯವಾಗಿದೆ.

Click to comment

Leave a Reply

Your email address will not be published. Required fields are marked *