Connect with us

ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಯುವಾಗ ಎದ್ದುಕುಳಿತ ವೃದ್ಧೆ

ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಯುವಾಗ ಎದ್ದುಕುಳಿತ ವೃದ್ಧೆ

ನವದೆಹಲಿ: ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗ ಕೊನೆ ಕ್ಷಣದಕಲ್ಲಿ ವೃದ್ಧೆ ಕಣ್ಣುಬಿಟ್ಟು ಕುಳಿತಿರುವ ಘಟನೆ ನಡೆದಿದೆ.

ಶಾಕುಂತಲಾ(76) ಕೊರೊನಾದಿಂದ ಮೃತಪಟ್ಟಿದ್ದರು ಎಂದು‌ ವೈದ್ಯರು ತಿಳಿಸಿದ್ದರು. ಮಹಾರಾಷ್ಟ್ರದ ಬಾರಾಮತಿ ಜಿಲ್ಲೆಯ ಮುಧಲೆ ಗ್ರಾಮದ ನಿವಾಸಿಯಾಗಿದ್ದು, ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.

ಶಾಕುಂತಲಾ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲು ಬಾರಾಮತಿಗೆ ಕರೆದುಕೊಂಡು ಬಂದಿದ್ದರು. ಆದರೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಶಾಕುಂತಲಾ ಪ್ರಜ್ಞೆತಪ್ಪಿದ್ದರು. ಆದರೆ ಇದನ್ನು ತಿಳಿಯದ ಕುಟುಂಬಸ್ಥರು ಶಾಕುಂತಲಾ ಸಾವನ್ನಪ್ಪಿದಳು ಎಂದು ಗ್ರಾಮದವರಿಗೆ ತಿಳಿಸಿದರು. ಅದರಂತೆ ಗ್ರಾಮದಲ್ಲಿ ಅಂತಿಮ ಸಂಸ್ಕಾರಕ್ಕೆ ಸಿದ್ದತೆ ನಡೆಸಲು ಸೂಚಿಸಿದ್ದರು. ಅದರಂತೆ ಗ್ರಾಮಸ್ಥರು ತಯಾರಿ ಮಾಡಿಕೊಂಡಿದ್ದರು.

ಆದರೆ ಶಕುಂತಲಾ ಏಕಾಏಕಿ ಕಣ್ಣು ಬಿಟ್ಟು ಎದ್ದು ಕುಳಿತು ಕಣ್ಣೀರು ಹಾಕಿದ್ದಾರೆ. ಕುಟುಂಬಸ್ಥರು ಶಕುಂತಲಾ ಎದ್ದು ಕುಳಿತಿರುವುದನ್ನು ಆಶ್ಚರ್ಯ ಪಟ್ಟಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ವರದಿಯಾಗಿದೆ.

Advertisement
Advertisement