Connect with us

Bengaluru City

ಇಂದು 7,012 ಮಂದಿಗೆ ಕೊರೊನಾ- 8,344 ಡಿಸ್ಚಾರ್ಜ್

Published

on

ಬೆಂಗಳೂರು: ರಾಜ್ಯದಲ್ಲಿಂದು 7,012 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 8,344 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇವತ್ತು 51 ಸೋಂಕಿತರು ಸಾವನ್ನಪ್ಪಿದ್ದು, ಕೊರೊನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 10,478ಕ್ಕೆ ಏರಿಕೆಯಾಗಿದೆ.

ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 7,65,586ಕ್ಕೆ ಏರಿಕೆಯಾಗಿದ್ದು, 1,09,264 ಸಕ್ರಿಯ ಪ್ರಕರಣಗಳಿವೆ. ಸದ್ಯ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 945 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 138, ಬಳ್ಳಾರಿ 171, ಬೆಳಗಾವಿ 71, ಬೆಂಗಳೂರು ಗ್ರಾಮಾಂತರ 288, ಬೆಂಗಳೂರು ನಗರ 3,535, ಬೀದರ್ 7, ಚಾಮರಾಜನಗರ 60, ಚಿಕ್ಕಬಳ್ಳಾಪುರ 86, ಚಿಕ್ಕಮಗಳೂರು 119, ಚಿತ್ರದುರ್ಗ 226, ದಕ್ಷಿಣ ಕನ್ನಡ 183, ದಾವಣಗೆರೆ 84, ಧಾರವಾಡ 135, ಗದಗ 53, ಹಾಸನ 257, ಹಾವೇರಿ 24, ಕಲಬುರಗಿ 67, ಕೊಡಗು 72, ಕೋಲಾರ 71, ಕೊಪ್ಪಳ 35, ಮಂಡ್ಯ 308, ಮೈಸೂರು 404, ರಾಯಚೂರು 44, ರಾಮನಗರ 32, ಶಿವಮೊಗ್ಗ 103, ತುಮಕೂರು 99, ಉಡುಪಿ 129, ಉತ್ತರ ಕನ್ನಡ 92, ವಿಜಯಪುರ 95 ಮತ್ತು ಯಾದಗಿರಿಯಲ್ಲಿ 24 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *