Crime
ಸೆಕ್ಸ್ ಗೆ ಒಪ್ಪದ 6ನೇ ಪತ್ನಿ – ಏಳನೇ ಮದ್ವೆಗೆ ಸಿದ್ಧನಾದ ಮುದುಕ

– ತನಗಿಂತ 21 ವರ್ಷ ಚಿಕ್ಕವಳ ಜೊತೆ ಮದುವೆ
– ಸೆಕ್ಸ್ ಗೆ ಒಪ್ಪುವ ಹೆಂಡ್ತಿಗಾಗಿ ವೃದ್ಧನ ಅಲೆದಾಟ
ಗಾಂಧಿನಗರ: ತನಗಿಂತ 21 ವರ್ಷದ ಚಿಕ್ಕವಳಾದ ಆರನೇ ಪತ್ನಿ ಲೈಂಗಿಕ ಕ್ರಿಯೆಗೆ ಒಪ್ಪದ್ದಕ್ಕೆ 63 ವರ್ಷದ ಮುದುಕ ಏಳನೇ ಮದುವೆಗೆ ಸಿದ್ಧನಾಗಿದ್ದಾನೆ. ಗುಜರಾತಿನ ಸೂರತ್ ನಲ್ಲಿ ಈ ಘಟನೆ ನಡೆದಿದ್ದು, ವೃದ್ಧ ಪತಿ ವಿರುದ್ಧ ಆರನೇ ಪತ್ನಿ ಪೊಲೀಸ್ ಠಾಣೆಯಲ್ಲು ದೂರು ದಾಖಲಿಸಿದ್ದಾಳೆ.
ಆಯುಬ್ ಖಾನ್ (63) ಏಳನೇ ಮದುವೆಗೆ ಸಿದ್ಧನಾಗಿರುವ ಮುದುಕ. ತನಗಿಂತ 21 ವರ್ಷ ಚಿಕ್ಕವಳಾದ ವಿಧವೆಗೆ ಬಾಳು ನೀಡುವದಾಗಿ ನಂಬಿಸಿ ಆಯುಬ್ ಮದುವೆಯಾಗಿದ್ದನು. ಮಹಿಳೆ ಸಹ ಕಷ್ಟಕಾಲದಲ್ಲಿ ಆಶ್ರಯ ಬಯಸಿ ಆಯೂಬ್ ನನ್ನ ಮದುವೆಯಾಗಿದ್ದಳು. ಮದುವೆ ಬಳಿಕ ಮಹಿಳೆಗೆ ತಾನು ಆರನೇ ಪತ್ನಿ ಅನ್ನೋ ವಿಚಾರ ತಿಳಿದಿದೆ. ಐದು ಮದುವೆಗಳನ್ನ ಸಹ ಆಯೂಬ್ ಯಾರಿಗೆ ತಿಳಿಯದಂತೆ ಮದುವೆಯಾಗಿದ್ದಾನೆ.
ಪತಿಯ ನವರಂಗಿ ಆಟ ತಿಳಿದ ಆರನೇ ಪತ್ನಿ ಆತನಿಂದ ಅಂತರ ಕಾಯ್ದುಕೊಂಡಿದ್ದಳು. ಆದ್ರೆ ಮುದುಕ ಆಯೂಬ್ ಮಾತ್ರ ಸೆಕ್ಸ್ ಗಾಗಿ ಪತ್ನಿಯನ್ನ ಪೀಡಿಸಿದ್ದಾನೆ. ಆರನೇ ಹೆಂಡ್ತಿ ಲೈಂಗಿಕ ಕ್ರಿಯೆಗೆ ಸಹಕರಿಸುತ್ತಿಲ್ಲ. ನನಗೆ ಡಯಾಬಿಟಿಸ್, ಹೃದ್ರೋಗ ಸೇರಿದಂತೆ ವಯೋಸಹಜ ಕಾಯಿಲೆಗಳಿವೆ ಎಂದು ಹೇಳಿ ನನ್ನಿಂದ ದೂರವಾಗಿದ್ದಾಳೆ. ಹಾಗಾಗಿ ಏಳನೇ ಮದುವೆಗೆ ಸಿದ್ಧನಾಗಿದ್ದೇನೆ ಎಂದು ಆಯೂಬ್ ಆಪ್ತರ ಬಳಿ ಹೇಳಿಕೊಂಡಿರುವ ಬಗ್ಗೆ ವರದಿಯಾಗಿದೆ.
ಗಂಡ ಏಳನೇ ಮದುವೆಗೆ ಸಿದ್ಧವಾಗುತ್ತಿರುವ ವಿಷಯ ಅರಿತ 6ನೇ ಪತ್ನಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ನನ್ನ ಹಾಗೆ ಇನ್ನೆಷ್ಟು ಮಹಿಳೆಯರಿಗೆ ಮೋಸ ಮಾಡಿದ್ದಾನೆ ಅನ್ನೋದರ ಬಗ್ಗೆ ತನಿಖೆ ನಡೆಸಿ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
