Connect with us

Corona

ರಾಜ್ಯದಲ್ಲಿಂದು 6,297 ಮಂದಿಗೆ ಕೊರೊನಾ- 8,500 ಡಿಸ್ಚಾರ್ಜ್

Published

on

ಬೆಂಗಳೂರು: ರಾಜ್ಯದಲ್ಲಿಂದು 6,297 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 66 ಸೋಂಕಿತರು ಸಾವನ್ನಪ್ಪಿದ್ದಾರೆ. 8,500 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,76,901ಕ್ಕೆ ಏರಿಕೆಯಾಗಿದ್ದು, 1,03,945 ಸಕ್ರಿಯ ಪ್ರಕರಣಗಳಿವೆ. ಕೊರೊನಾದಿಂದ ರಾಜ್ಯದಲ್ಲಿ ಇದುವರೆಗೂ 10,608 ಮಂದಿ ಪ್ರಾಣ ಕಳೆದುಕೊಂಡಿದ್ದು, ಸದ್ಯ 941 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್ ಸೋಂಕಿನ ಖಚಿತ ಪ್ರಕರಣಗಳು ಪ್ರಮಾಣ ಶೇ.6.41ರಷ್ಟಿದೆ. ಇತ್ತ ಕೋವಿಡ್-19 ಮರಣ ಪ್ರಮಾಣ ಶೇ. 1.04ರಷ್ಟಿದೆ. ಇಂದು 98,236 ಸ್ಯಾಂಪಲ್ ಗಳನ್ನು ಕೊರೊನಾಗೆ ಪರೀಕ್ಷೆಗೆ ಒಳಪಡಿಸಲಾಗಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 27, ಬಳ್ಳಾರಿ 188, ಬೆಳಗಾವಿ 89, ಬೆಂಗಳೂರು ಗ್ರಾಮಾಂತರ 319, ಬೆಂಗಳೂರು ನಗರ 2,821, ಬೀದರ್ 10, ಚಾಮರಾಜನಗರ 32, ಚಿಕ್ಕಬಳ್ಳಾಪುರ 166, ಚಿಕ್ಕಮಗಳೂರು 104, ಚಿತ್ರದುರ್ಗ 109, ದಕ್ಷಿಣ ಕನ್ನಡ 146, ದಾವಣಗೆರೆ 206, ಧಾರವಾಡ 104, ಗದಗ 38, ಹಾಸನ 249, ಹಾವೇರಿ 42, ಕಲಬುರಗಿ 67, ಕೊಡಗು 24, ಕೋಲಾರ 29, ಕೊಪ್ಪಳ 77, ಮಂಡ್ಯ 108, ಮೈಸೂರು 451, ರಾಯಚೂರು 25, ರಾಮನಗರ 23, ಶಿವಮೊಗ್ಗ 116, ತುಮಕೂರು 327, ಉಡುಪಿ 103, ಉತ್ತರ ಕನ್ನಡ 180, ವಿಜಯಪುರ 80 ಮತ್ತು ಯಾದಗಿರಿಯಲ್ಲಿ 37 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *