Connect with us

Karnataka

62ನೇ ವಯಸ್ಸಿನಲ್ಲಿ ಡಾನ್ಸ್ ಮಾಡಿದ ಮಹಿಳೆಯ ವೀಡಿಯೋ ವೈರಲ್

Published

on

ಖಿನ್ನತೆಯಿಂದ ಹೊರಬರಲು ಡಾನ್ಸ್‍ನಲ್ಲಿ ತೊಡಗಿಕೊಂಡ ವೃದ್ಧೆ

ಯಸ್ಸು ಬರೀ ಸಂಖ್ಯೆ ಎನ್ನುವುದನ್ನು 62ನೇ ವಯಸ್ಸಿನ ವೃದ್ಧೆಯೊಬ್ಬರು ತಮ್ಮ ನೃತ್ಯ ಕೌಶಲ್ಯದಿಂದ ಸಾಬೀತು ಪಡಿಸಿದ್ದಾರೆ. ವೃದ್ಧೆಯ ಡಾನ್ಸ್ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ರವಿ ಬಾಲಾ ಶರ್ಮಾ (62)ರ ವೃದ್ದಾಪ್ಯದ ವಯಸ್ಸಿನಲ್ಲಿ ತಮ್ಮ ಅಪ್ರತಿಮ ನೃತ್ಯ ಕೌಶಲ್ಯದಿಂದ ಎಲ್ಲರು ಹೃದಯ ಗೆದ್ದಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಇವರು ಶೇರ್ ಮಾಡಿರುವ ವೀಡಿಯೋ ಎಲ್ಲರ ಗಮನವನ್ನು ಸೆಳೆದಿದ್ದು ಮಾತ್ರವಲ್ಲದೆ, ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ.

ಶರ್ಮಾ ಪತಿ ತೀರಿಕೊಂಡ ನೋವಿನಲ್ಲಿ ಖಿನ್ನತೆಗೊಳಗಾಗಿದ್ದರಂತೆ. ಈ ಸಂದರ್ಭದಲ್ಲಿ ಖಿನ್ನತೆಯಿಂದ ಹೊರಬರಲು ಡಾನ್ಸ್‍ನಲ್ಲಿ ತೊಡಗಿಕೊಳ್ಳುವಂತೆ ಮಕ್ಕಳು ಇವರಿಗೆ ಪ್ರೇರೇಪಿಸಿದರಂತೆ. ಇವರ ಜೀವನ ಬೇರೆಯವರ ಜೀವನೋತ್ಸಾಹಕ್ಕೂ ಮಾದರಿಯಾಗಿದ್ದಾರೆ.

ಅನೇಕ ಬಾಲಿವುಡ್ ಸಾಂಗ್‍ಗಳಿಗೆ ರವಿ ಬಾಲಾ ಶರ್ಮಾ ಹೆಜ್ಜೆ ಹಾಕಿದ್ದಾರೆ. ಕೋವಿಡ್-19 ಲಾಕ್‍ಡೌನ್ ಸಂದರ್ಭದಲ್ಲಿ ಹಲವಾರು ನೃತ್ಯಗಳನ್ನು ಮಾಡಿದ್ದಾರೆ. ವೀಡಿಯೋಗಳನ್ನು ಇನ್‍ಸ್ಟಾಗ್ರಾಮ್‍ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇವರ ಹುಮ್ಮಸ್ಸು, ಜೀವನೋತ್ಸಾಹವನ್ನು ನೋಡಿದ ನೆಟ್ಟಿಗೆರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *