ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಿಂಕ್ ಬಾಲ್ ಟೆಸ್ಟ್ ನ ಎರಡನೇ ದಿನ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಬೌಲಿಂಗ್ ದಾಳಿಗೆ ಭಾರತ ಬೌಲ್ಡ್ ಆಗಿದೆ.
Advertisement
ಮೊದಲ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 99 ರನ್ಗಳಿಸಿತ್ತು. ಎರಡನೇ ದಿನ ಬ್ಯಾಟಿಂಗ್ ಮುಂದುವರಿಸಿದ ಭಾರತದ ಪಾಲಿಗೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವಿಲನ್ ಆದರು. 6.2 ಓವರ್ ಎಸೆದ ರೂಟ್ 3 ಮೇಡನ್ ಓವರ್ ಸಹಿತ 5 ವಿಕೆಟ್ ಕಿತ್ತು ಭಾರತದ ಬೃಹತ್ ಮುನ್ನಡೆಯ ಕನಸಿಗೆ ತಣ್ಣಿರೆರಚಿದರು.
Advertisement
Advertisement
ಭಾರತ ಪರ ರೋಹಿತ್ ಶರ್ಮಾ 66 ರನ್(96 ಎಸೆತ, 11 ಬೌಂಡರಿ) ಹೊಡೆದದನ್ನು ಹೊರತು ಪಡಿಸಿ, ಬೇರೆ ಯಾವುದೇ ಬ್ಯಾಟ್ಸ್ಮ್ಯಾನ್ ಇಂಗ್ಲೆಂಡ್ ಬೌಲರ್ ಗಳ ದಾಳಿಗೆ ತಡೆಯೊಡ್ಡುವ ಪ್ರಯತ್ನಕ್ಕೆ ಮುಂದಾಗಲಿಲ್ಲ. ಅಂತಿಮವಾಗಿ ಭಾರತ ನಿನ್ನೆಯ ಮೊತ್ತಕ್ಕೆ 46 ರನ್ ಸೇರಿಸಿ 145 ರನ್ಗೆ ಸರ್ವಪತನ ಕಂಡಿತು.
Advertisement
That's Tea on Day 2 of the third @Paytm #INDvENG #PinkBallTest!
England 112 all out#TeamIndia all out for 145 and secure a 33-run lead. @ImRo45 66
Joe Root 5/8
We shall be back for the second session of the Day shortly!
Scorecard ???? https://t.co/9HjQB6TZyX pic.twitter.com/iuCl9bnJdF
— BCCI (@BCCI) February 25, 2021
ಇಂಗ್ಲೆಂಡ್ ಪರ ಜೋ ರೂಟ್ 5 ವಿಕೆಟ್ ಕಬಳಿಸಿ ಮಿಂಚಿದರು. ಸ್ಪಿನ್ನರ್ ಜೇಕ್ ಲಿಚ್ 4 ವಿಕೆಟ್ ಪಡೆದರೆ, ಇನ್ನೂಳಿದ ಒಂದು ವಿಕೆಟ್ ಜೊಫ್ರಾ ಆರ್ಚರ್ ಪಾಲಾಯಿತು.