Bengaluru City
ಇಂದು 550 ಕೊರೊನಾ ಸೋಂಕು – 15,809 ಜನಕ್ಕೆ ಲಸಿಕೆ

ಬೆಂಗಳೂರು: ಇಂದು 550 ಜನಕ್ಕೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 9,37,933ಕ್ಕೆ ಏರಿಕೆಯಾಗಿದೆ. ಇಂದು ಕೊರೊನಾದಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಸದ್ಯ ರಾಜ್ಯದಲ್ಲಿ 6,202 ಸಕ್ರಿಯ ಪ್ರಕರಣಗಳಿದ್ದು, 150 ಸೋಂಕಿ ತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 12,209ಕ್ಕೆ ಏರಿಕೆಯಾಗಿದ್ದು, ಇಂದು 644 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.83 ಮತ್ತು ಮರಣ ಪ್ರಮಾಣ ಶೇ.0.36ರಷ್ಟಿದೆ. ಇಂದು ರಾಜ್ಯದಲ್ಲಿ 15,809 ಜನರು ಕೊರೊನಾ ಲಸಿಕೆಯನ್ನ ಪಡೆದುಕೊಂಡಿದ್ದಾರೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 4, ಬಳ್ಳಾರಿ 2, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು ನಗರ 311, ಬೀದರ್ 5, ಚಾಮರಾಜನಗರ 5, ಚಿಕ್ಕಬಳ್ಳಾಪುರ 15, ಚಿಕ್ಕಮಗಳೂರು 2, ಚಿತ್ರದುರ್ಗ 15, ದಕ್ಷಿಣ ಕನ್ನಡ 34, ದಾವಣಗೆರೆ 3, ಧಾರವಾಡ 5, ಗದಗ 0, ಹಾಸನ 12, ಹಾವೇರಿ 1, ಕಲಬುರಗಿ 16, ಕೊಡಗು 22, ಕೋಲಾರ 9, ಕೊಪ್ಪಳ 0, ಮಂಡ್ಯ 4, ಮೈಸೂರು 19, ರಾಯಚೂರು 0, ರಾಮನಗರ 2, ಶಿವಮೊಗ್ಗ 10, ತುಮಕೂರು 18, ಉಡುಪಿ 13, ಉತ್ತರ ಕನ್ನಡ 9, ವಿಜಯಪುರ 2 ಮತ್ತು ಯಾದಗಿರಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಕೊರೊನಾ ಲಸಿಕೆ: ಬಾಗಲಕೋಟೆ 226, ಬಳ್ಳಾರಿ 102, ಬೆಳಗಾವಿ 1,052, ಬೆಂಗಳೂರು ಗ್ರಾಮಾಂತರ 83, ಬೆಂಗಳೂರು ನಗರ 5,464, ಬೀದರ್ 78, ಚಾಮರಾಜನಗರ 28, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 209, ಚಿತ್ರದುರ್ಗ 0, ದಕ್ಷಿಣ ಕನ್ನಡ 1,468, ದಾವಣಗೆರೆ 660, ಧಾರವಾಡ 375, ಗದಗ 76, ಹಾಸನ 402, ಹಾವೇರಿ 0, ಕಲಬುರಗಿ 579, ಕೊಡಗು 232, ಕೋಲಾರ 397, ಕೊಪ್ಪಳ 140, ಮಂಡ್ಯ 461, ಮೈಸೂರು 1238, ರಾಯಚೂರು 144, ರಾಮನಗರ 77, ಶಿವಮೊಗ್ಗ 490, ತುಮಕೂರು 339, ಉಡುಪಿ 1014, ಉತ್ತರ ಕನ್ನಡ 0, ವಿಜಯಪುರ 475 ಮತ್ತು ಯಾದಗಿರಿ 0.
