Connect with us

Corona

ದೇಶದಲ್ಲಿ 51 ಲಕ್ಷಕ್ಕೂ ಅಧಿಕ ಮಂದಿ ಕೊರೊನಾದಿಂದ ಗುಣಮುಖ

Published

on

– 61 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾದಿಂದ ಈಗಾಗಲೇ 51 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ. ಇನ್ನು ಸೋಂಕಿತರ ಸಂಖ್ಯೆ 61 ಲಕ್ಷದ ಗಡಿ ದಾಟಿದೆ.

ಕಳೆದ 24 ಗಂಟೆಯಲ್ಲಿ 70,589 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 61,45,292ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ 776 ಮಂದಿ ಮಹಾಮಾರಿ ಕೋವಿಡ್ 19ಗೆ ಬಲಿಯಾಗಿದ್ದಾರೆ. ಇದೂವರೆಗೂ ದೇಶದಲ್ಲಿ 96,318 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

61,45,292 ಸೋಂಕಿತರ ಪೈಕಿ 9,47,576 ಸಕ್ರಿಯ ಪ್ರಕರಣಗಳಿದ್ದು, 51,01,398 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಒಟ್ಟಿನಲ್ಲಿ ಕಳೆದ ಒಂದು ತಿಂಗಳಲ್ಲಿ ದೇಶದಲ್ಲಿ ಶೇ.100ರಷ್ಟು ಗುಣಮುಖ ಪ್ರಮಾಣ ಕಂಡುಬಂದಿದೆ. ಸೆಪ್ಟೆಂಬರ್ 17ರಂದು ದೇಶದಲ್ಲಿ 40,25,079 ಮಂದಿ ಗುಣಮುಖರಾಗಿದ್ದು, ಸೆ. 28ರ ವೇಳೆ 50 ಲಕ್ಷದ ಗಡಿ ದಾಟಿತ್ತು.

ದೇಶದಲ್ಲಿ ನಿನ್ನೆ ಒಂದೇ ದಿನ 11,42,811 ಮಂದಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ. ಈ ಮೂಲಕ ಇದೂವರೆಗೂ 7,31,10,041 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

Click to comment

Leave a Reply

Your email address will not be published. Required fields are marked *