Saturday, 15th December 2018

Recent News

ಜನರಿಗೆ ಜಾಗೃತಿ ಮೂಡಿಸ್ತಿದ್ದಾಗ 5 ಎನ್‍ಜಿಒ ಕಾರ್ಯಕರ್ತೆಯರನ್ನು ಕಿಡ್ನಾಪ್‍ಗೈದು ಗ್ಯಾಂಗ್‍ರೇಪ್!

ಸಾಂದರ್ಭಿಕ ಚಿತ್ರ

ರಾಂಚಿ: ಮಾನವ ಕಳ್ಳಸಾಗಾಣಿಕೆ ವಿರೋಧಿಸಿ ಜಾಗೃತಿ ಮೂಡಿಸುತ್ತಿದ್ದ ಐವರು ಸರ್ಕಾರೇತರ ಸಂಸ್ಥೆಯ(ಎನ್‍ಜಿಒ) ಕಾರ್ಯಕರ್ತೆಯರನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರಗೈದ ಘಟನೆ ಜಾರ್ಖಂಡ್ ರಾಜ್ಯದ ಖುಂತಿ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಮಾನವ ಕಳ್ಳಸಾಗಾಣಿಕೆ ವಿರೋಧಿಸಿ ಎನ್‍ಜಿಒ ಕಾರ್ಯಕರ್ತೆಯರು ಬೀದಿ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಕೊಚಾಂಗ್ ಬ್ಲಾಕ್ ನ ಮಿಶನ್ ಶಾಲೆಯೊಂದರ ಆವರಣದಲ್ಲಿ ಬೀದಿ ನಾಟಕ ಮಾಡುತ್ತಿದ್ದರು. ಅಷ್ಟರಲ್ಲಿ ವಾಹನವೊಂದರಲ್ಲಿ ಬಂದ ಶಸ್ತ್ರಧಾರಿ ವ್ಯಕ್ತಿಗಳು ಕಾರ್ಯಕರ್ತೆಯರನ್ನು ಅಪಹರಿಸಿದ್ದಾರೆ ಎಂದು ರಾಂಚಿ ಡಿಐಜಿ ಎಚ್. ವಲಿ ಹೋಮ್ಕಾರ್ ತಿಳಿಸಿದ್ದಾರೆ

ಮಹಿಳೆಯರನ್ನು ಬಲವಂತವಾಗಿ ಕಾರಿನಲ್ಲಿ ಬಂದು ಅಪಹರಿಸಿದ ಕಾಮುಕರು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಮೂರು ಗಂಟೆಗಳ ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ. ಈ ಕೃತ್ಯ ಪಥಲ್ ಗಡಿ ಬೆಂಬಲಿಗರದ್ದೇ ಎಂದು ಹೇಳಲಾಗಿದೆ.

ಯುವತಿಯರನ್ನು ಅತ್ಯಾಚಾರಗೈದಿರುವ ಕಿರಾತಕರು ಅದನ್ನು ವಿಡಿಯೊ ಚಿತ್ರೀಕರಣ ಮಾಡಿದ್ದು, ಒಂದು ವೇಳೆ ಪೊಲೀಸರಿಗೆ ದೂರು ನೀಡಿದರೆ ವಿಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಕಾಮುಕರ ಬೆದರಿಕೆಗೆ ಹೆದರಿದ ಮಹಿಳೆಯರು ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ ಮೂಲಗಳನ್ನು ಪೊಲೀಸರಿಗೆ ಈ ಕೃತ್ಯದ ಬಗ್ಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ರೀತಿಯಾದ ಯಾವುದೇ ವಿಡಿಯೊ ಕಂಡುಬಂದಲ್ಲಿ ತಕ್ಷಣ ಪೊಲೀಸರ ಗಮನಕ್ಕೆ ತನ್ನಿ. ಈಗಾಗಲೇ ಕಾಮುಕರ ಪತ್ತೆಗೆ ಪ್ರತ್ಯೇಕ ತಂಡಗಳನ್ನು ನಿಯೋಜಿಸಲಾಗಿದೆ. ಆ ಗುಂಪಿನ ಕೆಲವರ ಗುರುತು ಕೂಡ ಪತ್ತೆಯಾಗಿದೆ. ಈ ಕುರಿತು ಹಲವೆಡೆ ತೀವ್ರ ಶೋಧ ನಡೆದಿದೆ ಎಂದು ಡಿಐಜಿ ಎಚ್. ವಲಿ ಹೋಮ್ಕಾರ್ ತಿಳಿಸಿದ್ದಾರೆ.

ಪಥಲ್ ಗಡಿ ಎಂದರೇನು:
ಜಖಾರ್ಂಂಡ್ ಬುಡಕಟ್ಟು ಜನಾಂಗಗಳು ಹೆಚ್ಚು ವಾಸವಾಗಿರುವ ಕಡೆ ಈ ಸಮುದಾಯದ ಪ್ರಾಬಲ್ಯ ಹೊಂದಿರುತ್ತದೆ. ಪ್ರಾಬಲ್ಯ ಹೊಂದಿದವರಿಗೆ ಪಥಲ್ ಗಡಿ ಎಂದು ಕರೆಯಲಾಗುತ್ತದೆ. ಪೊಲೀಸರಿಗೆ ಅಥವಾ ಸರ್ಕಾರಿ ಅಧಿಕಾರಿಗಳಿಗೆ ಈ ಗ್ರಾಮಗಳಿಗೆ ಪ್ರವೇಶ ಇರುವುದಿಲ್ಲ. ಪಥಲ್ ಗಡಿಯವರಿಂದ ಅನುಮತಿ ಸಿಕ್ಕಿದರೆ ಮಾತ್ರ ಈ ಗ್ರಾಮಗಳ ಪ್ರವೇಶ ಮಾಡಬಹುದಾಗಿದೆ.

Leave a Reply

Your email address will not be published. Required fields are marked *