Chamarajanagar
ಕೊರೊನಾ ಲಸಿಕೆ ಪಡೆದ ಐವರು ವೈದ್ಯರಿಗೆ ಕೊರೊನಾ ಪಾಸಿಟಿವ್

ಚಾಮರಾಜನಗರ: ಮಹಾಮಾರಿ ಕೊರೊನಾಗೆ ಲಸಿಕೆ ಪಡೆದುಕೊಂಡಿದ್ದ 5 ಮಂದಿ ವೈದ್ಯರಲ್ಲಿ ಇದೀಗ ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡಿದ್ದು, ಆತಂಕ ಹುಟ್ಟಿಸಿದೆ.
ಐವರು ವೈದ್ಯರು ವಾರದ ಹಿಂದೆ ಕೋವಿಡ್ ಲಸಿಕೆ ಪಡೆದಿದ್ದರು. ಇದೀಗ ಲಸಿಕೆ ಪಡೆದ 7 ಮಂದಿಯಲ್ಲಿ ಐವರು ವೈದ್ಯರಿಗೆ ಕೊರೊನಾ ದೃಢವಾದ ಬೆನ್ನಲ್ಲೇ ಚಾಮರಾಜನಗರ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಈ ಐವರು ವೈದ್ಯರು ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದರು. ಸದ್ಯ 6 ಮಂದಿಯನ್ನು ಹೋಂ ಐಸೋಲೇಷನ್ ಹಾಗೂ ಒಬ್ಬರಿಗೆ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಚಾಮರಾಜನಗರ ಡಿಎಚ್ಒ ಡಾ.ರವಿ ಮಾಹಿತಿ ನೀಡಿದ್ದು, ಈಗಾಗ್ಲೇ ನಮ್ಮಲ್ಲಿ 7 ಜನ ವೈದ್ಯರಿಗೆ ಕೊರೊನಾ ಬಂದಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದ್ದ ವೈದ್ಯರು ಕಳೆದೊಂದು ವಾರದ ಹಿಂದೆ ಲಸಿಕೆ ಪಡೆದಿದ್ದರು. ಅದರಲ್ಲಿ 5 ಮಂದಿ ಲಸಿಕೆ ಪಡೆದ ವೈದ್ಯರಿಗೆ ಕೊರೊನಾ ಬಂದಿದೆ. ಮೂವರು ಕೊವಾಕ್ಸಿನ್, ಇಬ್ಬರು ಕೋವಿಶೀಲ್ಡ್ ಲಸಿಕೆ ಪಡೆದಿದ್ದ. ವೈದ್ಯರ ಜೊತೆ ಸಂಪರ್ಕದಲ್ಲಿದ್ದವರಿಗೂ ಪರೀಕ್ಷೆ ನಡೆಸಲಾಗಿದೆ. ಲಸಿಕೆ ಪಡೆದ ಐವರಿಗಷ್ಟೇ ಕೊರೋನಾ ಬಂದಿದೆ. ಉಳಿದ ಸಿಬ್ಬಂದಿಯಲ್ಲಿ ಕೊರೊನಾ ಪ್ರಕರಣ ಕಂಡುಬಂದಿಲ್ಲ. ಯಾರೂ ಕೂಡ ಆತಂಕಪಡುವ ಅಗತ್ಯವಿಲ್ಲ. ಎಲ್ಲರೂ ಕೂಡ ಆರೋಗ್ಯವಾಗಿದ್ದಾರೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಕೊರೊನಾ ಲಸಿಕೆಯ ಮೊದಲನೇ ಡೋಸ್ ಪಡೆದ 28 ದಿನಗಳ ನಂತರ ಎರಡನೇ ಡೋಸ್ ಪಡೆಯಬೇಕಿದ್ದು, ಎರಡನೇ ಡೋಸ್ ಪಡೆದ 14-15 ದಿನಗಳ ನಂತರ, ಅಂದರೆ, ಮೊದಲನೇ ಡೋಸ್ ಪಡೆದ ಸುಮಾರು 45 ದಿನಗಳ ನಂತರವಷ್ಟೇ ರೋಗ ನಿರೋಧಕ ಶಕ್ತಿ ಬರಲಿದೆ. ಈ ನಡುವೆ ಲಸಿಕೆ ಪಡೆದ ವ್ಯಕ್ತಿ ವೈರಾಣುವಿನ ಸಂಪರ್ಕಕ್ಕೆ ಬಂದಿದ್ದರೆ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. (1/2)
— Dr Sudhakar K (@mla_sudhakar) January 30, 2021
ಇನ್ನು ಲಸಿಕೆ ಪಡೆದ ಬಳಿಕ ಕೊರೊನಾ ಬರುವ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಸುಧಾಕರ್, ಕೊರೊನಾ ಲಸಿಕೆಯ ಮೊದಲನೇ ಡೋಸ್ ಪಡೆದ 28 ದಿನಗಳ ನಂತರ ಎರಡನೇ ಡೋಸ್ ಪಡೆಯಬೇಕಿದ್ದು, ಎರಡನೇ ಡೋಸ್ ಪಡೆದ 14-15 ದಿನಗಳ ನಂತರ ಅಂದರೆ, ಮೊದಲನೇ ಡೋಸ್ ಪಡೆದ ಸುಮಾರು 45 ದಿನಗಳ ನಂತರವಷ್ಟೇ ರೋಗ ನಿರೋಧಕ ಶಕ್ತಿ ಬರಲಿದೆ. ಈ ನಡುವೆ ಲಸಿಕೆ ಪಡೆದ ವ್ಯಕ್ತಿ ವೈರಾಣುವಿನ ಸಂಪರ್ಕಕ್ಕೆ ಬಂದಿದ್ದರೆ ಸೋಂಕು ತಗುಲುವ ಸಾಧ್ಯತೆ ಇರುತ್ತದೆ.
ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಈ ಲಸಿಕೆಗಳನ್ನು ಸಾರ್ವಜನಿಕರು ಯಾವುದೇ ಹಿಂಜರಿಕೆ ಇಲ್ಲದೆ ತೆಗೆದುಕೊಳ್ಳಬಹುದು. ಕೊರೊನಾ ಲಸಿಕೆಯ ಬಗ್ಗೆ ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ, ಕೇವಲ ಸರ್ಕಾರದ ಅಧಿಕೃತ ಮಾಹಿತಿಯನ್ನು ಮಾತ್ರ ಪರಿಗಣಿಸಬೇಕು ಎಂದು ಮತ್ತೊಮ್ಮೆ ಮನವಿ ಮಾಡುತ್ತೇನೆ. (2/2)
— Dr Sudhakar K (@mla_sudhakar) January 30, 2021
ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಈ ಲಸಿಕೆಗಳನ್ನು ಸಾರ್ವಜನಿಕರು ಯಾವುದೇ ಹಿಂಜರಿಕೆ ಇಲ್ಲದೆ ತೆಗೆದುಕೊಳ್ಳಬಹುದು. ಕೊರೊನಾ ಲಸಿಕೆಯ ಬಗ್ಗೆ ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ, ಕೇವಲ ಸರ್ಕಾರದ ಅಧಿಕೃತ ಮಾಹಿತಿಯನ್ನು ಮಾತ್ರ ಪರಿಗಣಿಸಬೇಕು ಎಂದು ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದು ಸಚಿವರು ಬರೆದುಕೊಂಡಿದ್ದಾರೆ.
