LatestMain PostNational

5 ಕೆಜಿ ಚಿನ್ನ ಧರಿಸಿ ನಾಮಪತ್ರ ಸಲ್ಲಿಸಿದ ಗೋಲ್ಡ್ ಮ್ಯಾನ್

Advertisements

ಚೆನ್ನೈ: ಪಂಚರಾಜ್ಯಗಳ ಚುನಾವಣೆ ಬಿರುಸು ಪಡೆದುಕೊಂಡಂತೆ ಚುನಾವಣಾ ಪ್ರಚಾರ ರ್ಯಾಲಿಗಳು ನಡೆಯುತ್ತಿದ್ದು ಕೆಲ ರಾಜ್ಯಗಳಲ್ಲಿ ನಾಮಪತ್ರ ಸಲ್ಲಿಕೆಯಾಗುತ್ತಿದೆ. ಹಾಗೆ ತಮಿಳುನಾಡಿನಲ್ಲೊಬ್ಬ ಪಕ್ಷೇತರ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಬರುತ್ತಿದ್ದಂತೆ 5 ಕೆಜಿ ಚಿನ್ನಾಭರಣಗಳನ್ನು ಮೈ ಮೇಲೆ ಹಾಕಿಕೊಂಡು ಬಂದು ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದಾರೆ.

ತಿರುನೆಲ್ವೇಲಿ ಜಿಲ್ಲೆಯ ಅಲಂಗುಲಂ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸಿದ ಹರಿ ನಾದರ್ 5 ಕೆಜಿ ಚಿನ್ನಭರಣ ಧರಿಸಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ. ಪನಂಗಟ್ಟು ಪಡೈ ಎಂಬ ಸಂಘದ ಸಂಯೋಜಕರಾಗಿರುವ ಹರಿ ನಾದರ್ ಅಷ್ಟೊಂದು ಚಿನ್ನವನ್ನು ಧರಿಸಿಕೊಂಡು ನಾಮಪತ್ರಸಲ್ಲಿಸಲು ಬರುತ್ತಿದ್ದಂತೆ ಎಲ್ಲರು ಕೂಡ ಆಶ್ಚರ್ಯ ಚಕಿತರಾಗಿದ್ದರು. ಹರಿನಾದರ್ ನಾಮಪತ್ರದಲ್ಲಿ 11.2 ಕೆಜಿ ಚಿನ್ನಾಭರಣವಿದೆ ಎಂದು ನಮೂದಿಸಿ ಚುನಾವಣಾಧಿಕಾರಿಗೆ ಲೆಕ್ಕ ಪತ್ರ ಸಲ್ಲಿಸಿದ್ದಾರೆ.

ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಮತ್ತು ನಾಮಪತ್ರ ಸಲ್ಲಿಕೆ ಜೋರಾಗಿದ್ದು, ಕೆಲ ಅಭ್ಯರ್ಥಿಗಳು ತಮ್ಮ ವಿಭಿನ್ನ ಅವತಾರಗಳಿಂದ ಗಮನಸೆಳೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅಭ್ಯರ್ಥಿಯೊಬ್ಬರು ಪಿಪಿಇ ಕಿಟ್ ಧರಿಸಿಕೊಂಡು ನಾಮಪತ್ರ ಸಲ್ಲಿಸಲು ಬಂದಿದ್ದ ಬಗ್ಗೆ ವರದಿಯಾಗಿತ್ತು.

Leave a Reply

Your email address will not be published.

Back to top button