– ಹುಡುಗನನ್ನ ಚಿಕ್ಕಪ್ಪ ಅಂತಿದ್ದ ಬಾಲಕಿ
ಜೈಪುರ: 15 ವರ್ಷದ ಹುಡುಗ ತನ್ನನ್ನ ಚಿಕಪ್ಪ ಎಂದು ಕರೆಯುತ್ತಿದ್ದ ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಅಲ್ವಾರ ಜಿಲ್ಲೆಯ ಥಾಣಾಗಾಜಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನ ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಬಾಲಕಿಯನ್ನ ದಾಖಲಿಸಿರುವ ಆಸ್ಪತ್ರೆಗೆ ತೆರಳಿದ ಎಸ್.ಪಿ.ತೇಜಸ್ವಿನಿ ಗೌತಮ್ ಮಾಹಿತಿ ಪಡೆದುಕೊಂಡಿದ್ದಾರೆ. ಬಾಲಕಿ ತನ್ನ ಮೇಲಾದ ದೌರ್ಜನ್ಯ ಹೇಳಿ ಭಯದಿಂದ ಕಣ್ಣೀರು ಹಾಕಿದ್ದಾಳೆ ಎಂದು ವರದಿಯಾಗಿದೆ.
Advertisement
Advertisement
ಆರೋಪಿ ಅಪ್ತಾಪ್ತ ಬಾಲಕಿಯನ್ನ ಆಟಕ್ಕೆ ಎಂದು ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಕಂದಮ್ಮ ಮನೆಗೆ ಅಳುತ್ತಾ ಬಂದು ಚಿಕಪ್ಪನ ಬಗ್ಗೆ ದೂರು ಹೇಳಿದ್ದಾಳೆ. ಪೋಷಕರು ಮಗುವನ್ನ ಆಸ್ಪತ್ರೆಗೆ ದಾಖಲಿಸಿದಾಗ ಅತ್ಯಾಚಾರ ನಡೆದಿರೋದು ಬೆಳಕಿಗೆ ಬಂದಿದೆ.
Advertisement
Advertisement
ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಚ್ಚೆತ್ತ ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ. ಮಗುವನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಎರಡೂ ಕುಟುಂಬಸ್ಥರ ಹೇಳಿಕೆಯನ್ನ ಪೊಲೀಸರು ದಾಖಲಿಸಿಕೊಳ್ಳುತ್ತಿದ್ದಾರೆ.
ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಥಾಣಾಗಾಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಹ ಅದೇ ಗ್ರಾಮದ ನಿವಾಸಿಯಾಗಿದ್ದಾನೆ. ಬಾಲಕಿಯ ಪಕ್ಕದ ಮನೆಯಲ್ಲಿ ಆರೋಪಿ ವಾಸವಾಗಿದ್ದು, 9ನೇ ಕ್ಲಾಸ್ ಓದುತ್ತಿದ್ದಾನೆ ಎಂದು ಡಿಎಸ್ ಪಿ ಬಲರಾಮ್ ಮೀಣಾ ಹೇಳಿದ್ದಾರೆ.