Corona
ದೇಶದಲ್ಲಿ 90 ಲಕ್ಷದ ಗಡಿ ದಾಟಿದ ಕೊರೊನಾ

ನವದೆಹಲಿ: ಮಹಾಮಾರಿ ಕೊರೊನಾ ದೇಶದಲ್ಲಿ 90 ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 46,232 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 90,50,598ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ 564 ಜನರನ್ನು ಕೊರೊನಾ ಬಲಿ ಪಡೆದುಕೊಂಡಿದ್ದು, ಸದ್ಯ 4,39,747 ಸಕ್ರಿಯ ಪ್ರಕರಣಗಳಿವೆ. ನಿನ್ನೆ ಒಂದೇ ದಿನ 49,715 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ನವೆಂಬರ್ 20ರಂದು ದೇಶದಲ್ಲಿ 10,66,022 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
With 46,232 new #COVID19 infections, India's total cases rise to 90,50,598
With 564 new deaths, toll mounts to 1,32,726. Total active cases at 4,39,747
Total discharged cases at 84,78,124 with 49,715 new discharges in last 24 hrs. pic.twitter.com/tFnfmhP5KR
— ANI (@ANI) November 21, 2020
ಶುಕ್ರವಾರ ದೇಶದ ರಾಜಧಾನಿಯಲ್ಲಿ ಅತ್ಯಧಿಕ ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆ ದ 24 ಗಂಟೆಯಲ್ಲಿ 6,608 ಹೊಸ ಪ್ರಕರಣಗಳು ವರದಿಯಾಗಿದ್ದು, 118 ಜನರು ಸಾವನ್ನಪ್ಪಿದ್ದಾರೆ. ತದನಂತರ ನೆರೆಯ ಕೇರಳದಲ್ಲಿ 6,208 ಮತ್ತು ಮಹಾರಾಷ್ಟ್ರದಲ್ಲಿ 6,640 ಮಂದಿಗೆ ಸೋಂಕು ತಗುಲಿದೆ.
ಯಾದಗಿರಿಯಲ್ಲಿ ಡಿಗ್ರಿ ವಿದ್ಯಾರ್ಥಿಗಳು ಅತಂತ್ರ – ಕೊರೊನಾ ರಿಪೋರ್ಟ್ ಸಿಗದೆ ಪರದಾಟ https://t.co/PeeHNGpvAv#Yadagiri #Students #CoronaVirus #Covid19 #CoronaTest #KannadaNews
— PublicTV (@publictvnews) November 21, 2020
