Connect with us

Latest

ಲವ್ ಜಿಹಾದ್ ಹೆಸರಲ್ಲಿ 46 ಯುವತಿಯರ ಮಾರಾಟ-ವೈರಲ್ ಫೋಟೋ ಸತ್ಯ

Published

on

ಬೆಂಗಳೂರು: ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಫೋಟೋ ವೈರಲ್ ಆಗುತ್ತಿದೆ. ಈ ಎಲ್ಲ ಯುವತಿಯರು ಲವ್ ಜಿಹಾದ್ ಗೆ ಬಲಿಯಾಗಿದ್ದು, ಸದ್ಯ ಪೊಲೀಸರು ಎಲ್ಲರನ್ನು ರಕ್ಷಣೆ ಮಾಡಿದ್ದಾರೆ ಎಂಬ ಬರಹಗಳೊಂದಿಗೆ ಫೋಟೋ ಹರಿದಾಡುತ್ತಿದೆ.

ಪುಷ್ಪೇಂದ್ರ ಕುಲಶ್ರೇಷ್ಠ ಎಂಬ ವ್ಯಕ್ತಿ ತಮ್ಮ ಟ್ವಿಟ್ಟರ್ ನಲ್ಲಿ ಯುವತಿಯರ ಫೋಟೋ ಹಂಚಿಕೊಂಡಿದ್ದು, 2 ಸಾವಿರಕ್ಕೂ ಅಧಿಕ ಬಾರಿ ರೀಟ್ವೀಟ್ ಮತ್ತು 3.7 ಸಾವಿರ ಲೈಕ್ಸ್ ಪಡೆದುಕೊಂಡಿದೆ. ಕಳೆದ 7 ತಿಂಗಳಿನಿಂದ ಕಾಣೆಯಾಗಿದ್ದ 46 ಯುವತಿಯರನ್ನು ಬೇರೆ ಬೇರೆ ಸ್ಥಳಗಳಲ್ಲಿ ಛತ್ತೀಸಗಢ ರಾಜ್ಯದ ಕವಾರ್ದಾ ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೆಚ್ಚಿನ ಯುವತಿಯರು ಪ್ರೇಮದ ಹೆಸರಿನಲ್ಲಿ ಲವ್ ಜಿಹಾದ್ ಗೆ ಬಲಿಯಾಗಿದ್ದರು. ಇವರನ್ನು ಜಿಹಾದ್ ಹೆಸರಿನಲ್ಲಿ ಮಾರಾಟ ಮಾಡಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ವೈರಲ್ ಫೋಟೋ ಸತ್ಯ:
ಒಂದು ವರ್ಷದ ಹಿಂದೆ ಛತ್ತೀಸಗಢ ಪೊಲೀಸರು ಮಸಾಜ್ ಪಾರ್ಲರ್ ಹೆಸರಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ಅಡ್ಡ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ 10 ಯುವತಿಯರನ್ನು ಬಂಧಿಸಿದ್ದರು. ಅಂದು ತೆಗೆದ ಫೋಟೋವನ್ನು ಇಂದು ಬೇರೆ ಶೀರ್ಷಿಕೆ ನೀಡಿ ಸುಳ್ಳು ಸುದ್ದಿಯನ್ನು ಹರಿಯಬಿಡಲಾಗುತ್ತಿದೆ.

ಆನ್‍ಲೈನ್ ”ಸೆಕ್ಸ್ ರಾಕೇಟ್- ವಾಟ್ಸಪ್ ಮೂಲಕ ಮಾಂಸ ದಂಧೆ” ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿಯೊಂದು ಪ್ರಕಟವಾಗಿತ್ತು. ಈ ಸುದ್ದಿಯಲ್ಲಿನ ಫೋಟೋ ಬಳಸಿಕೊಂಡು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ. ಛತ್ತೀಸಗಢದ ರಾಯ್ಪುರನ ರಾಜೇಂದ್ರ ನಗರದಲ್ಲಿ ಸೆಕ್ಸ್ ಅಡ್ಡದ ಮೇಲೆ ಪೊಲೀಸರು ದಾಳಿ ನಡೆಸಿ, ಸಿಕ್ಕಿಂ ಮೂಲದ 10 ಯುವತಿಯರನ್ನು ಬಂಧಿಸಿದ್ದರು.