Corona
ರಾಜ್ಯದಲ್ಲಿಂದು 4,471 ಮಂದಿಗೆ ಕೊರೊನಾ- 52 ಸಾವು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಇಂದು 4,471 ಮಂದಿಗೆ ಸೋಂಕು ತಗುಲಿದೆ. ಒಟ್ಟು ಇಂದು 52 ಮಂದಿ ಕೊರೊನಾದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 7,98,378ಕ್ಕೆ ಏರಿಕೆಯಾಗಿದ್ದು, 86,749 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ರಾಜ್ಯದಲ್ಲಿ ಕೊರೊನಾ 10,873 ಸೋಂಕಿತರನ್ನ ಬಲಿ ಪಡೆದುಕೊಂಡಿದೆ. ಐಸಿಯುನಲ್ಲಿ 935 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸೋಂಕಿನ ಖಚಿತ ಪ್ರಮಾಣ ಶೇ.3.97 ಮತ್ತು ಮೃತಪಟ್ಟವರ ಪ್ರಮಾಣ ಶೇ.1.16ರಷ್ಟಿದೆ. ಇಂದು ಒಟ್ಟು 1,12,545 ಮಂದಿಯನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 57, ಬಳ್ಳಾರಿ 129, ಬೆಳಗಾವಿ 73, ಬೆಂಗಳೂರು ಗ್ರಾಮಾಂತರ 102, ಬೆಂಗಳೂರು ನಗರ 2,251, ಬೀದರ್ 7, ಚಾಮರಾಜನಗರ 34, ಚಿಕ್ಕಬಳ್ಳಾಪುರ 78, ಚಿಕ್ಕಮಗಳೂರು 85, ಚಿತ್ರದುರ್ಗ 84, ದಕ್ಷಿಣ ಕನ್ನಡ 136, ದಾವಣಗೆರೆ 52, ಧಾರವಾಡ 93, ಗದಗ 14, ಹಾಸನ 136, ಹಾವೇರಿ 30, ಕಲಬುರಗಿ 71, ಕೊಡಗು 33, ಕೋಲಾರ 45, ಕೊಪ್ಪಳ 49, ಮಂಡ್ಯ 163, ಮೈಸೂರು 173, ರಾಯಚೂರು 25, ರಾಮನಗರ 22, ಶಿವಮೊಗ್ಗ 79, ತುಮಕೂರು 232, ಉಡುಪಿ 81, ಉತ್ತರ ಕನ್ನಡ 48, ವಿಜಯಪುರ 62 ಮತ್ತು ಯಾದಗಿರಿಯಲ್ಲಿ 27 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
