Monday, 16th September 2019

Recent News

ಒಂದೇ ಓವರ್‌ನಲ್ಲಿ 43 ರನ್ – ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಿಂದ ವಿಶ್ವದಾಖಲೆ!

ಹ್ಯಾಮಿಲ್ಟನ್: ನ್ಯೂಜಿಲೆಂಡ್ ನ ಇಬ್ಬರು ಬ್ಯಾಟ್ಸ್ ಮನ್ ಗಳು ಲಿಸ್ಟ್ ಎ ಏಕದಿನ ಪಂದ್ಯದ ಓವರ್ ಒಂದರಲ್ಲಿ 43 ರನ್ ಚಚ್ಚುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಕೀವಿಸ್ ನಾರ್ಥರ್ನ್ ಡಿಸ್ಟ್ರಿಕ್ಟ್ಸ್ ತಂಡದ ಬ್ಯಾಟ್ಸ್ ಮನ್‍ಗಳಾದ ಜೋಯಿ ಕಾರ್ಟರ್ ಮತ್ತು ಬ್ರೆಟ್ ಹ್ಯಾಂಪ್ಟನ್ ಬುಧವಾರ ನಡೆದ ಫೋರ್ಡ್ ಟ್ರೋಫಿ ಪಂದ್ಯದಲ್ಲಿ ಎದುರಾಳಿ ತಂಡವಾದ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ವಿರುದ್ಧ ಈ ವಿಶೇಷ ಸಾಧನೆ ಮಾಡಿದ್ದಾರೆ.

ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ತಂಡದ ಮಧ್ಯಮ ವೇಗಿ ವಿಲ್ಲೆಮ್ ಲುಡಿಕ್ ಓವರ್ ನಲ್ಲಿ ಈ ಸಾಧನೆ ಮಾಡಿದ್ದು, ಓವರ್ ಮೊದಲ ಐದು ಬಾಲ್ ಎದುರಿಸಿದ ಲುಡಿಕ್ ಕ್ರಮವಾಗಿ 4, 6 (ನೋಬಾಲ್), 6 (ನೋಬಾಲ್), 6, 1 ರನ್ ಬಾರಿಸಿದರು. ಬಳಿಕ ಸ್ಟ್ರೈಕ್ ಪಡೆದ ಕಾರ್ಟರ್ ಅಂತಿಮ ಮೂರು ಎಸೆತಗಳನ್ನು ಸಿಕ್ಸರ್ ಸಿಡಿಸಿ ಮಿಂಚಿದರು. ಪಂದ್ಯದಲ್ಲಿ 10 ಓವರ್ ಬೌಲ್ ಮಾಡಿದ ಲುಡಿಕ್ ಮೊದಲ 9 ಓವರ್ ಗಳಲ್ಲಿ ಕೇವಲ 42 ರನ್ ಮಾತ್ರ ನೀಡಿದ್ದರು. ಆದರೆ ಅಂತಿಮ 10ನೇ ಓವರ್ ಮುಕ್ತಾಯದ ವೇಳೆ 85 ರನ್ ನೀಡಿದ್ದರು.

ಪಂದ್ಯದಲ್ಲಿ ಕಾರ್ಟರ್ 5 ರನ್ ಗಳಿಂದ ಶತಕ ವಂಚಿತರಾದರೆ, ಲುಡಿಕ್ 102 ರನ್ ಸಿಡಿಸಿ ಶತಕ ಪೂರೈಸಿದರು. ಈ ಇಬ್ಬರ ಜೋಡಿ 6ನೇ ವಿಕೆಟ್‍ಗೆ 178 ರನ್ ಜೊತೆಯಾಟ ನೀಡಿತು. ಇಬ್ಬರ ಭರ್ಜರಿ ಬ್ಯಾಟಿಂಗ್ ನಿಂದಾಗಿ ನಾರ್ಥರ್ನ್ ಡಿಸ್ಟ್ರಿಕ್ಟ್ಸ್ ತಂಡ ನಿಗದಿತ 50 ಓವರ್ ಗಳಲ್ಲಿ 317 ರನ್ ಗಳಿಸಿತು. ಬಳಿಕ ಬೃಹತ್ ಮೊತ್ತ ಬೆನ್ನತ್ತಿದ್ದ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ತಂಡ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ಹಿಂದೆ 2013ರ ಲಿಸ್ಟ್ ಎ ಢಾಕಾದ ಪ್ರೀಮಿಯರ್ ಲೀಗ್ ನಲ್ಲಿ ಬಾಂಗ್ಲಾದೇಶದ ಅಲಾವುದ್ದೀನ್ ಬಾಬು 39 ರನ್ ಬಿಟ್ಟುಕೊಟ್ಟಿದ್ದರು. ಈ ಪಂದ್ಯದಲ್ಲಿ ಜಿಂಬಾಂಬ್ವೆ ತಂಡದ ಎಲ್ಟನ್ ಚಿಗುಂಬರ ಈ ಸಾಧನೆ ಮಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *