Connect with us

Crime

ಹುಬ್ಬಳ್ಳಿ To ಗೋವಾ- ಮಾತಿನ ಮಲ್ಲ ದರ್ಜಿಯ ಮೋಹದ ಬಲೆಯಲ್ಲಿ ಸಿಲುಕಿದ ಗೃಹಿಣಿ

Published

on

– ಟೇಲರ್ ಲವ್ ಸ್ಟೋರಿಯ ರೋಚಕ ಕಥಾನಕ
– ಆಕೆಗೆ 35, ಅವನಿಗೆ 42 ಇಬ್ಬರ ನಡುವೆ ಚಿಗುರೊಡೆದ ಪ್ರೇಮ

ಹುಬ್ಬಳ್ಳಿ/ಧಾರವಾಡ: ಅವಳಿಗೆ ವಯಸ್ಸು 35. ಅವನಿಗೆ 42. ಇಬ್ಬರಿಗೂ ಅವರವರ ಎತ್ತರಕ್ಕೆ ಮಕ್ಕಳು ಬೆಳೆದಿದ್ದಾರೆ. ಗ್ರಾಮದಲ್ಲಿ ಇಬ್ಬರು ಸಜ್ಜನ ಕುಟುಂಬದವರೇ ಆಗಿದ್ದಾರೆ. ಇಬ್ಬರಿಬ್ಬರ ಮಧ್ಯೆ ಚಿಗುರೊಡೆದ ಪ್ರೀತಿ ಪ್ರೇಮಪಯಣ ತನಕ ಬಂದಿದೆ. ಹೌದು ಹುಬ್ಬಳ್ಳಿ ತಾಲೂಕಿನ ಪಾಲಿಕೋಪ್ಪ ಗ್ರಾಮದಲ್ಲಿ ಇಂತಹ ವಿಲಕ್ಷಣವಾದ ಮಧ್ಯ ವಯಸ್ಸಿನ ಪ್ರೇಮ ಕಥಾನಕವೊಂದು ದುರಂತ ಅಂತ್ಯ ಕಂಡಿದೆ.

ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಪೋಲಿಸರು ಪ್ರೇಮಿ ಹಜರೇಸಾಬ್ ಓಲೇಕಾರರನ್ನು ಬಂಧಿಸಿದ್ದಾರೆ. ಅಪಹರಣ ಮತ್ತು ಅತ್ಯಾಚಾರ ಪ್ರಕರಣದಡಿಯಲ್ಲಿ ಪ್ರೇಮಿಯನ್ನು ಬಂಧಿಸಿ ಅಟ್ರಾಸಿಟಿ ಕೇಸ್ ಕೂಡಾ ಜಡಿದು ಜೈಲಿಗಟ್ಟಿದ್ದಾರೆ. ಹಜರೇಸಾಬ್‍ನ ಜತೆಯಲ್ಲಿದ್ದ ಪ್ರಿಯತಮೆಯನ್ನು ಪೋಲಿಸರು ರಕ್ಷಣೆ ಮಾಡಿ ಗೋವಾದಿಂದ ಹುಬ್ಬಳ್ಳಿಗೆ ಕರೆತಂದಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಪಾಲಿಕೊಪ್ಪದಲ್ಲಿ ಹಜರೇಸಾಬ್ ಓಲೇಕಾರ್ ಫೇಮಸ್ ಟೇಲರ್. ಮನೆಯಲ್ಲಿ ಯಾವುದೋ ಕಾರಣಕ್ಕೆ ಜಗಳ ಮಾಡಿಕೊಂಡು ಹೆಂಡತಿ ಮಕ್ಕಳಿಂದ ದೂರವಿದ್ದ. ಒಬ್ಬನೇ ಟೇಲರಿಂಗ್ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ. ಆಗ ಗೃಹಿಣಿಯ ಪರಿಚಯವಾಗಿದೆ ಟೇಲರ್ ಅಲ್ವಾ ಅದು ಇದು ಅಂತಾ ನೆಪ ಹೇಳಿಕೊಂಡು ಮೇಡಂ ಮನೆಗೆ ಆಗಾಗ ಬಂದು ಹೋಗ್ತಿದ್ದ. ಮಾತಿನ ಮಲ್ಲನಾಗಿದ್ದ ಈ ಟೇಲರ್ ಗೆ ಗೃಹಿಣಿ ಮರಳಾಗಿದ್ದಾಳೆ. ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ. ಕಳೆದ ತಿಂಗಳು ರಾತ್ರಿ ಸಮಯ ನೋಡಿಕೊಂಡು ಪಾಲಿಕೊಪ್ಪದಿಂದ ಇಬ್ಬರು ಪರಾರಿಯಾಗಿದ್ದಾರೆ. ಮರುದಿನವೇ ಗೃಹಿಣಿಯ ಪತಿ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಹುಬ್ಬಳ್ಳಿ ಗ್ರಾಮೀಣ ಪೋಲಿಸರು ಸರ್ಚಿಂಗ್ ಶುರುಮಾಡಿದಾಗ, ಇಬ್ಬರು ಗೋವಾದಲ್ಲಿ ಸೆರೆ ಸಿಕ್ಕಿದ್ದಾರೆ. ನೆಟ್‍ವರ್ಕ ಟ್ರೇಸ್ ಮಾಡಿದ ಪೋಲಿಸರಿಗೆ ಲವರ್ಸ್ ರೆಡ್ ಹ್ಯಾಂಡೆಡ್ ಆಗಿ ಗೋವಾದಲ್ಲಿ ಸಿಕ್ಕಿಬಿದ್ದಿದ್ದಾರೆ. ಪೋಲಿಸರು ಇಬ್ಬರನ್ನು ಹುಬ್ಬಳ್ಳಿಯ ಗ್ರಾಮೀಣ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಸೀನ್ ಏಕ್‍ಧಂ ಉಲ್ಟಾ ಪಲ್ಟಾ ಆಗಿದೆ. ನನಗೆ ಟೇಲರ್ ಯಾಮಾರಿಸಿ ಗೋವಾಗೆ ಕರಕ್ಕೋಂಡು ಹೋಗಿದ್ದಾನೆ. ನನಗೆ ಅಲ್ಲಿಗೆ ಹೋಗಿದ್ದೇ ಅರಿವಿಲ್ಲ. ಏನೋ ಬ್ಲಾಕ್ ಮ್ಯಾಜಿಕ್ ಮಾಡಿದ್ದಾನೆ ಅಂತಾ ಸಂತ್ರಸ್ತೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪೋಲಿಸರು ಹಜರೇಸಾಬ್‍ನ ವಿರುದ್ದ ಕಿಡ್ನ್ಯಾಪ್, ರೇಪ್ ಮತ್ತು ಅಟ್ರಾಸಿಟಿ ಕೇಸ್ ಕೂಡಾ ಜಡಿದು ಜೈಲಿಗಟ್ಟಿದ್ದಾರೆ. ಅಲ್ಲಿಗೆ ಫೇಮಸ್ ಟೇಲರ್ ಲವ್ ಸ್ಟೋರಿ ಟ್ರಾಜಿಡಿ ಏಂಡ್ ಆದತಾಗಿದೆ. ಅಟ್ರಾಸಿಟಿ ಕೇಸ್ ಆದ ಹಿನ್ನೆಲೆಯಲ್ಲಿ ಡಿವೈಎಸ್‍ಪಿ ನೇತೃತ್ವದಲ್ಲಿ ಪ್ರಕರಣ ತನಿಖೆ ಇನ್ನೂ ಮುಂದುವರಿದಿದೆ.

Click to comment

Leave a Reply

Your email address will not be published. Required fields are marked *