-ದಿನೇ ದಿನೇ ಶರವೇಗ ಪಡೆದುಕೊಳ್ತಿರೋ ಮಹಾಮಾರಿ
ನವದೆಹಲಿ: ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಕಬಂಧ ಬಾಹುಗಳ ಮೂಲಕ ತನ್ನ ವ್ಯಾಪ್ತಿಯನ್ನ ವಿಸ್ತರಿಸಿಕೊಳ್ಳುತ್ತಿದೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 86,432 ಮಂದಿಗೆ ಕೊರೊನಾ ತಗುಲಿದ್ದು, ಸೋಂಕಿತರ ಸಂಖ್ಯೆ 40 ಲಕ್ಷದ ಗಡಿ ದಾಟಿದೆ.
India's #COVID19 tally crosses 40 lakh with single-day spike of 86,432 new cases & 1,089 deaths reported in the last 24 hours.
The total case tally stands at 40,23,179 including 8,46,395 active cases, 31,07,223 cured/discharged/migrated & 69,561 deaths: Ministry of Health pic.twitter.com/IkmNVuhaRm
— ANI (@ANI) September 5, 2020
Advertisement
ನಿನ್ನೆ 1,089 ಸೋಂಕಿತರು ಬಲಿಯಾಗಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 67,561ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 40,23,179ಕ್ಕೆ ತಲುಪಿದ್ದು, ದೇಶದಲ್ಲಿ 31,07,223 ಸಕ್ರಿಯ ಪ್ರಕರಣಗಳಿವೆ. ಸೆಪ್ಟೆಂಬರ್ 4ರಂದು 10,59,346 ಜನರ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ಇದುವವರೆಗೂ 4,77,38,491 ಜನರು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ.
Advertisement
COVID-19 Testing Update . For more details visit: https://t.co/dI1pqvXAsZ @MoHFW_INDIA @DeptHealthRes #ICMRFIGHTSCOVID19 #IndiaFightsCOVID19 #CoronaUpdatesInIndia #COVID19 pic.twitter.com/lig2Q8OdCW
— ICMR (@ICMRDELHI) September 5, 2020
Advertisement
ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಅಮೆರಿಕಾ (62,00,375) ಮತ್ತು ಬ್ರೆಜಿಲ್ (40,91,801) ಮೊದಲ ಎರಡು ಸ್ಥಾನದಲ್ಲಿವೆ. ನೆರೆಯ ಮಹಾರಾಷ್ಟ್ರ (8,63062) ಕೊರೊನಾ ಪೀಡಿತ ರಾಜ್ಯಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಆಂಧ್ರ ಪ್ರದೇಶ (3,46,506), ತಮಿಳುನಾಡು (4,51,827), ಕರ್ನಾಟಕ (3,79.486) ಮತ್ತು ಉತ್ತರ ಪ್ರದೇಶ (2,53,175) ರಾಜ್ಯಗಳು ಕ್ರಮವಾಗಿ ಟಾಪ್ 5 ಸ್ಥಾನಗಳಲ್ಲಿವೆ.