ಲಕ್ನೋ: ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು 4 ವರ್ಷದ ಬಾಲಕಿಯನ್ನು ಅಪಹರಿಸಿ ಬಳಿಕ ಬಾಲಕಿಯನ್ನು ಮೀರತ್ ಜಿಲ್ಲೆಯ ಕಿಥೋರ್ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಸಿಂಭೋಲಿಯಲ್ಲಿ ಗುರುವಾರ ನಡೆದಿದೆ.
ಈ ವಿಚಾರವಾಗಿ ತನಿಖೆ ವೇಳೆ, ಬಾಲಕಿ ತನ್ನ ಸಹೋದರನೊಂದಿಗೆ ಟ್ಯೂಷನ್ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ವೇಳೆ ಘಟನೆ ಜರುಗಿದೆ. ಆರೋಪಿಗಳು ಅತ್ಯಾಚಾರ ಎಸಗಿದ ಬಳಿಕ ಮನೆಯಿಂದ 14 ಕಿ.ಮೀ ದೂರದಲ್ಲಿರುವ ಕಿಥೋರ್ ಕೃಷಿ ಭೂಮಿಯೊಂದರಲ್ಲಿ ಬಾಲಕಿ ದೇಹವನ್ನು ಎಸೆದು ಹೋಗಿದ್ದಾರೆ. ಬಾಲಕಿಯನ್ನು ಮೀರತ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ, ವೈದ್ಯಕೀಯ ಪರೀಕ್ಷೆ ನಡೆಸಿದಾಗ ಬಾಲಕಿ ಅತ್ಯಾಚಾರಕ್ಕೊಳಗಾಗಿರುವ ವಿಚಾರ ಬೆಳಕಿಗೆ ಬಂದಿದೆ.
Advertisement
Advertisement
ಘಟನೆ ಕುರಿತಂತೆ ಮಾತನಾಡಿದ ಹಾಪುರ ಪೊಲೀಸರು, ಗುರುವಾರ ಸಂಜೆ ಸುಮಾರು 4 ಗಂಟೆಗೆ ಬಾಲಕಿಯನ್ನು ಇಬ್ಬರು ವ್ಯಕ್ತಿಗಳು ಮೋಟಾರ್ ಬೈಕ್ನಲ್ಲಿ ಬಂದು ಅಪಹರಿಸಿದ್ದಾರೆ. ಆಕೆಯ ಮೇಲೆ ಅತ್ಯಾಚಾರ ಎಸಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಬಾಲಕಿಯನ್ನು ಮೀರತ್ ಕಿಥೋರ್ ಪಟ್ಟಣದ ಮಹಲ್ವಾಲಾ ಕಾಡಿನಲ್ಲಿರುವ ಸ್ಥಳೀಯರು ಗುರುತಿಸಿ ರಕ್ಷಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅನುಜ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಹೇಳಿದರು.
Advertisement
ಕುರಿ ಮೇಯಿಸಲು ಕಿಥೋರ್ ಕಾಡಿಗೆ ಹೋದ ವೃದ್ಧನೊಬ್ಬ ಬಾಲಕಿಯನ್ನು ಇಬ್ಬರು ದುಷ್ಕರ್ಮಿಗಳು ಕರೆದುಕೊಂಡು ಹೋಗಿದ್ದನ್ನು ನೋಡಿದ್ದಾನೆ. ಇದರಿಂದ ಅನುಮಾನಗೊಂಡು ಮರ ಏರಿ ನೋಡಿದ ವೃದ್ಧನಿಗೆ ದುಷ್ಕರ್ಮಿಗಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದನ್ನು ಕಂಡು ಆತಂಕಗೊಂಡು ಹಳ್ಳಿಗೆ ಹೋಗಿ ಅಲ್ಲಿದ್ದ ಸ್ಥಳೀಯರಿಗೆ ತಿಳಿಸಿದ್ದಾನೆ. ಹೀಗಾಗಿ ಸ್ಥಳೀಯರು ಘಟನಾ ಸ್ಥಳಕ್ಕೆ ತಲುಪುವಷ್ಟರಲ್ಲಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದು, ಈ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Advertisement
https://t.co/B0WgdnBIxn pic.twitter.com/W4OS5lknU2
— HAPUR POLICE (@hapurpolice) February 20, 2021
ಸದ್ಯ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳು ಎಲ್ಲಾ ಸಿಸಿಟಿವಿ ಕ್ಯಾಮೆರಾಗಳಿಂದ ತಪ್ಪಿಸಿಕೊಂಡಿದ್ದಾರೆ. ಆದರೂ ಪೊಲೀಸರು ಇನ್ನಿತರ ರಸ್ತೆಮಾರ್ಗಗಳ ವೀಡಿಯೋವನ್ನು ವೀಕ್ಷಿಸುತ್ತಿದ್ದಾರೆ.