Connect with us

Corona

ಶಿವಮೊಗ್ಗದಲ್ಲಿ ನಾಲ್ವರು ಸೋಂಕಿತರು ಗುಣಮುಖ- ಆಸ್ಪತ್ರೆಯಿಂದ ಡಿಸ್ಚಾರ್ಜ್

Published

on

– ಹೋಮ್ ಕ್ವಾರಂಟೈನ್‍ಗೆ ಶಿಫ್ಟ್

ಶಿವಮೊಗ್ಗ: ಕೊರೊನಾದಿಂದ ಗುಣಮುಖರಾದ ನಾಲ್ವರನ್ನು ಇಂದು ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಮಾಡಲಾಗಿದ್ದು, ಹೋಮ್ ಕ್ವಾರಂಟೈನ್‍ಗೆ ಕಳುಹಿಸಲಾಗಿದೆ.

ಗ್ರೀನ್ ಝೋನ್ ನಲ್ಲಿದ್ದ ಶಿವಮೊಗ್ಗದಲ್ಲಿ ಕೊರೊನಾ ತಂದಿದ್ದ ಎಂಟು ಮಂದಿ ತಬ್ಲಿಘಿಗಳಲ್ಲಿ ಇದೀಗ ನಾಲ್ವರು ಡಿಸ್‍ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಯಲ್ಲಿ ನಡೆಸಲಾದ ಗಂಟಲು ದ್ರವ ಪರೀಕ್ಷೆಯಲ್ಲಿ ನಾಲ್ವರಿಗೆ ನೆಗೆಟಿವ್ ಬಂದಿದ್ದು, ಇವರನ್ನು ಮನೆಗೆ ವಾಪಾಸ್ ಕಳುಹಿಸಲಾಗಿದೆ. ಆದರೆ ಹೋಮ್ ಕ್ವಾರಂಟೈನ್‍ನಲ್ಲಿರುವುದು ಕಡ್ಡಾಯವಾಗಿದೆ.

ಮೇ.9 ರಂದು ಗುಜರಾತ್ ನ ಅಹಮದಾಬಾದ್ ನಿಂದ ಶಿವಮೊಗ್ಗಕ್ಕೆ ಬಂದಿದ್ದ ಇವರನ್ನು ಶಿವಮೊಗ್ಗದ ಬಾರ್ಡರ್ ನಲ್ಲಿಯೇ ಗುರುತಿಸಿ ಮೆಗ್ಗಾನ್ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಇವರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಮೆಗ್ಗಾನ್ ಆಸ್ಪತ್ರೆಯಿಂದ ಶಿಕಾರಿಪುರದ ನಿವಾಸಗಳಿಗೆ ಕಳಿಸಲಾಯಿತು.

ಈ ನಾಲ್ವರಿಗೆ ಇನ್ನೂ 14 ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ. ರಂಜಾನ್ ಹಬ್ಬದ ಸಂದರ್ಭದಲ್ಲಿ ರೋಗಿ ನಂ.808, 809, 813, 815 ನಾಲ್ವರಿಗೆ ಬಿಡುಗಡೆ ಭಾಗ್ಯ ದೊರೆತಂತಾಗಿದೆ. ಈ ಮೂಲಕ ಜಿಲ್ಲೆಯಲ್ಲಿ 34 ಇದ್ದ ಸೋಂಕಿತರ ಸಂಖ್ಯೆ 30ಕ್ಕೆ ಇಳಿಕೆಯಾಗಿದೆ ಎಂದು ಡಿಎಚ್‍ಒ ಡಾ.ನಾಗರಾಜ್ ಸುರ್ಗಿಹಳ್ಳಿ ತಿಳಿಸಿದ್ದಾರೆ.