ಅಥೆನ್ಸ್: ಹುಟ್ಟಿದ 37 ದಿನಗಳಲ್ಲಿ 17 ದಿನಗಳಕಾಲ ಕೊರೊನಾ ಸೋಂಕು ವಿರುದ್ಧ ಹೋರಾಡಿ ಮಗು ಮೃತಪಟ್ಟಿರುವ ಘಟನೆ ಗ್ರೀಸ್ನಲ್ಲಿ ನಡೆದಿದೆ.
ಮೂಗಿನ ಉರಿಯೂತ ಮತ್ತು ಜ್ವರ ಎಂದು ಗಂಡು ಮಗುವನ್ನು ಅಥೆನ್ಸ್ ಮಕ್ಕಳ ಆಸ್ಪತ್ರೆಗೆ ಕರೆತರಲಾಗಿತ್ತು. ಮಗುವನ್ನು ಒಂದು ದಿನದ ನಂತರ ತೀವ್ರ ನಿಗಾದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.
Advertisement
Advertisement
ಅಥೆನ್ಸ್ನಲ್ಲಿನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಅಸಹನೀಯ ಒತ್ತಡದಲ್ಲಿದೆ. ಹೀಗಾಗಿ ಹೆಚ್ಚುವರಿ ಖಾಸಗಿ ಆಸ್ಪತ್ರೆ ಸಂಪನ್ಮೂಲಗಳಿಗೆ ಕರೆ ನೀಡುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
Advertisement
Advertisement
ಗ್ರೀಸ್ನಲ್ಲಿ ಸುಮಾರು 6,800 ಸಕ್ರಿಯ ಕೋವಿಡ್-19 ಸೋಂಕಿತರಿದ್ದಾರೆ. ಸೋಂಕಿತರಲ್ಲಿ ಈ ಮಗು ಅತ್ಯಂತ ಕಿರಿಯದ್ದಾಗಿತ್ತು. 6,800 ಜನರು ವೈರಸ್ನಿಂದ ಸಾವನ್ನಪ್ಪಿದ್ದರೆ, ಸುಮಾರು 480 ಜನರು ತೀವ್ರ ನಿಗಾದಲ್ಲಿದ್ದಾರೆ. ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿವೆ ಎಂದು ಮಿತ್ಸೊಟಾಕಿಸ್ ಆರೋಪ ಕೇಳಿಬಂದಿದೆ.
Δυστυχώς σήμερα είχαμε το νεότερο θύμα της πανδημίας στη χώρα μας. Ένα βρέφος που πέρασε τις 17 από τις 37 ημέρες ζωής του παλεύοντας με τον κορωνοϊό. Ο ιός δεν κάνει διακρίσεις, όμως σήμερα η θλίψη είναι δυσβάσταχτη. Στην οικογένειά του εκφράζω τα πιο ειλικρινή μου συλλυπητήρια.
— Prime Minister GR (@PrimeministerGR) March 8, 2021
ದುಃಖಕರವೆಂದರೆ ಇಂದು ನಾವು ನಮ್ಮ ದೇಶದಲ್ಲಿ ಸಾಂಕ್ರಾಮಿಕ ರೋಗಕ್ಕೆ ತುತ್ತಾದ ಕಿರಿಯ ಬಲಿಪಶುವನ್ನು ಹೊಂದಿದ್ದೇವೆ, ಹುಟ್ಟಿ 37 ದಿನಗಳಲ್ಲಿ 17 ದಿನಗಳ ಕಾಲ ಕರೋನವೈರಸ್ ವಿರುದ್ಧ ಹೋರಾಡಿದೆ ಎಂದು ಅಥೆನ್ಸ್ ಪ್ರಧಾನಿ ಕಿರಿಯಾಕೋಸ್ ಮಿತ್ಸೊಟಾಕಿಸ್ ಟ್ವೀಟ್ ಮಾಡಿದ್ದಾರೆ.