Connect with us

Bengaluru City

ಇಂದು ರಾಜ್ಯದಲ್ಲಿ 35,024 ಕೊರೊನಾ ಪ್ರಕರಣ, 270 ಸಾವು

Published

on

– 14,74,846 ಸಕ್ರಿಯ ಪ್ರಕರಣ

ಬೆಂಗಳೂರು: ಇಂದು ಸಹ ಕೊರೊನಾ ಸ್ಫೋಟವಾಗಿದ್ದು, 35,024 ಹೊಸ ಪ್ರಕರಣಗಳು ವರದಿಯಾಗಿವೆ. ಇನ್ನು ಸಿಲಿಕಾನ್ ಸಿಟಿ ಕೊರೊನಾ ಆರ್ಭಟ ಮುಂದುವರಿದಿದ್ದು ಕಳೆದ 24 ಗಂಟೆಯಲ್ಲಿ 19,637 ಜನ ಸೋಂಕಿಗೆ ತುತ್ತಾಗಿದ್ದಾರೆ.

ಇವತ್ತು 14,142 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಐಸಿಯುನಲ್ಲಿ 2,431 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 14,74,846ಕ್ಕೇರಿಕೆಯಾಗಿದೆ. ಇದುವರೆಗೂ 15,306 ಜನ ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.19.92 ಮತ್ತು ಮರಣ ಪ್ರಮಾಣ ಶೇ.0.77ರಷ್ಟಿದೆ. ಇವತ್ತು 1,75,816 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ನಾಲ್ಕು ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನಾಲ್ಕಂಕಿ ದಾಟಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 302, ಬಳ್ಳಾರಿ 896, ಬೆಳಗಾವಿ 545, ಬೆಂಗಳೂರು ಗ್ರಾಮಾಂತರ 1,129, ಬೆಂಗಳೂರು ನಗರ 19,637, ಬೀದರ್ 180, ಚಾಮರಾಜನಗರ 359, ಚಿಕ್ಕಬಳ್ಳಾಪುರ 545, ಚಿಕ್ಕಮಗಳೂರು 242, ಚಿತ್ರದುರ್ಗ 126, ದಕ್ಷಿಣ ಕನ್ನಡ 1,175, ದಾವಣಗೆರೆ 196, ಧಾರವಾಡ 427, ಗದಗ 132, ಹಾಸನ 624, ಹಾವೇರಿ 111, ಕಲಬುರಗಿ 957, ಕೊಡಗು 537, ಕೋಲಾರ 536, ಕೊಪ್ಪಳ 220, ಮಂಡ್ಯ 939, ಮೈಸೂರು 1,219, ರಾಯಚೂರು 628, ರಾಮನಗರ 183, ಶಿವಮೊಗ್ಗ 372, ತುಮಕೂರು 1,195, ಉಡುಪಿ 568, ಉತ್ತರ ಕನ್ನಡ 377, ವಿಜಯಪುರ 408 ಮತ್ತು ಯಾದಗಿರಿಯಲ್ಲಿ 259 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Click to comment

Leave a Reply

Your email address will not be published. Required fields are marked *