Connect with us

Corona

ರಾಯಚೂರಿನಲ್ಲಿ 268ಕ್ಕೇರಿದ ಸೋಂಕಿತರ ಸಂಖ್ಯೆ- ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾದವರ ವಿರುದ್ಧ ಕೇಸ್

Published

on

ರಾಯಚೂರು: ಜಿಲ್ಲೆಗೆ ಇಂದು ಸಹ ಮಹಾರಾಷ್ಟ್ರದ ನಂಟು ಕಂಟಕವಾಗಿದ್ದು, 35 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಜಿಲ್ಲೆಯ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣ ಸಂಖ್ಯೆ 268ಕ್ಕೇರಿದೆ.

ಇಂದಿನ 35 ಪ್ರಕರಣದಲ್ಲಿ 6 ಜನರಿಗೆ ಜಿಲ್ಲೆಯ ಸೋಂಕಿತ ವ್ಯಕ್ತಿಗಳ ಸಂಪರ್ಕದಿಂದ ಪಾಸಿಟಿವ್ ಬಂದಿದೆ. ರೋಗಿ ಸಂಖ್ಯೆ 2254 ಮಸ್ಕಿ ಬ್ಯಾಂಕ್ ಉದ್ಯೋಗಿಯಿಂದ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮೂವರಲ್ಲಿ ಇಬ್ಬರು ಬ್ಯಾಂಕ್ ಉದ್ಯೋಗಿಗಳು ಹಾಗೂ 70 ವರ್ಷದ ಗ್ರಾಹಕನಿಗೆ ಕೊರೊನಾ ಸೋಂಕು ತಗುಲಿದೆ. ರೋಗಿ ಸಂಖ್ಯೆ 1460, 40 ವರ್ಷದ ಮಹಿಳೆಯಿಂದ ಇಬ್ಬರಿಗೆ ಕೊರೊನಾ ವೈರಸ್ ತಗುಲಿದೆ. ಮುಂಬೈನಿಂದ ಬಂದಿರುವ ಮಹಿಳೆಯಿಂದ ಇಬ್ಬರು ಸ್ಥಳೀಯರಿಗೆ ಕೊರೊನಾ ಬಂದಂತಾಗಿದೆ.

ರೋಗಿ ಸಂಖ್ಯೆ 1816, ಸೋಂಕಿತನಿಂದ 45 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಬಂದಿದೆ. ಇಂದಿನ 35 ಸೋಂಕಿತರಲ್ಲಿ 29 ಜನ ಮಹಾರಾಷ್ಟ್ರದಿಂದ ಬಂದಿದ್ದಾರೆ. ಮಾನ್ವಿ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡಿದ್ದು, ಮಹಾರಾಷ್ಟ್ರದಿಂದ ಬಂದ 6 ಜನರಿಗೆ ಪಾಸಿಟಿವ್ ಬಂದಿದೆ. ದೇವದುರ್ಗ ತಾಲೂಕಿನಲ್ಲಿ ಇದುವರೆಗೂ ಒಟ್ಟು 226 ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ಮಸ್ಕಿ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದ ಮೂವರನ್ನು ವಾಪಸ್ ಕರೆತರಲಾಗಿದೆ. ಮಸ್ಕಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ ಕೇಂದ್ರದಿಂದ ಹೊರಗಡೆ ಹೋಗಿದ್ದರು. ಮೂವರ ವಿರುದ್ಧ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಿಂದಾಗಿ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸಹಕರಿಸುವಂತೆ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೆ ಮನವಿ ಮಾಡಿದ್ದಾರೆ.